ಮಂಗಳೂರು, ಜನವರಿ 11, 2025 (ಕರಾವಳಿ ಟೈಮ್ಸ್) : ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದಲ್ಲಿ ಸಿಲಿಂಡರ್ ಸ್ಪೋಟಗೊಂಡು ಅನಾಹುತದಲ್ಲಿ ಮೃತಪಟ್ಟವರ ಮೂವರ ಕುಟುಂಬಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಪರಿಹಾರದ ಚೆಕ್ ವಿತರಿಸಿದರು.
ವಿಧಾನಸಭಾ ಸಭಾಪತಿ ಯು ಟಿ ಖಾದರ್ ಅವರ ವಿಶೇಷ ಶಿಫಾರಸ್ಸಿನ ಮೇರೆಗೆ ಮಂಜೂರಾತಿಗೊಂಡ ಪರಿಹಾರ ಧನವನ್ನು ಶನಿವಾರ ಸಂತ್ರಸ್ತರ ಮನೆಗೆ ಖುದ್ದು ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಅವರು ಹಸ್ತಾಂತರಿಸಿದರು.
ಒಂದೇ ಕುಟುಂಬದ ಖತೀಜತ್ತುಲ್ ಖುಬ್ರ, ಝಲೈಕಾ ಮೆಹ್ದಿ, ಸಲ್ಮಾ ಮಝಿಯಾ ಎಂಬವರು ಗ್ಯಾಸ್ ಸ್ಫೋಟಗೊಂಡು ಮೃತಪಟ್ಟಿದ್ದರು. ಮೂವರಿಗೆ ತಲಾ ಐದು ಲಕ್ಷದಂತೆ ಒಟ್ಟು 15 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿದರು.
ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಎಂ ಎಲ್ ಸಿ ಐವನ್ ಡಿ ಸೋಜ, ಎನ್ ಎಸ್ ಕರೀಂ ಮೊದಲಾದವರು ಜೊತೆಗಿದ್ದರು.
0 comments:
Post a Comment