ಬಂಟ್ವಾಳ, ಜನವರಿ 05, 2025 (ಕರಾವಳಿ ಟೈಮ್ಸ್) : ಬಂಟ್ವಾಳ-ಕೆಳಗಿನಪೇಟೆ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಕಬಡ್ಡಿ ತರಬೇತುದಾರ ಬಶೀರ್ ಕಲ್ಪನೆ ಅವರಲ್ಲಿ ತರಬೇತಿ ಪಡೆಯುತ್ತಿರುವ ಶಾಲಾ ಕಬಡ್ಡಿ ಕ್ರೀಡಾಪಟು ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವ ತರಬೇತಿ ಹಾಗೂ ಪಿಯುಸಿ ನಂತರದ ಕೋರ್ಸುಗಳ ಬಗ್ಗೆ ಮಾಹಿತಿ ಕಾರ್ಯಾಗಾರವು ಬೋಳಂತೂರು ಕಲ್ಪನೆಯಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಮಾತನಾಡಿ, ಆಸ್ತಿ-ಅಂತಸ್ತುಗಳು ಯಾವುದೇ ನಮ್ಮ ಭವಿಷ್ಯಕ್ಕೆ ಉಪಯೋಗಕ್ಕೆ ಬರುವುದಿಲ್ಲ. ನಾವು ಪಡೆದ ವಿದ್ಯೆ, ಸಂಸ್ಕಾರಗಳು ಮಾತ್ರ ನಮ್ಮ ವ್ಯಕ್ತಿತ್ವವನ್ನು ರೂಪಿಸಲಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ನೆಲ್ಯಾಡಿ ಅನುದಾನಿತ ಶಾಲಾ ದೈಹಿಕ ಶಿಕ್ಷಣ ಉಪನ್ಯಾಸಕ ಮಹಮ್ಮದ್ ಹಾರಿಸ್ ಕಲ್ಪನೆ ಹಾಗೂ ಪತ್ರಕರ್ತ ಪಿ ಎಂ ಅಶ್ರಫ್ ಪಾಣೆಮಂಗಳೂರು ಅವರು ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.
ಈ ಸಂದರ್ಭ ಕಬಡ್ಡಿ ತೀರ್ಪುಗಾರ ಹಾಗೂ ತರಬೇತುದಾರ ಬಶಿರ್ ಕಲ್ಪನೆ, ಸಜಿಪನಡು ಗ್ರಾಮ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಸಜಿಪ, ನ್ಯಾಯವಾದಿ ಮುಹಮ್ಮದ್ ಹನೀನ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸಾಜಿದ್ ಉಳ್ಳಾಲ, ಇರ್ಶಾದ್ ಗೂಡಿನಬಳಿ, ಹಮೀದ್ ಕೋಡಿಕಂಡ, ಅಬ್ದುಲ್ ಖಾದರ್ ಕಾಪಿಕಾಡು, ಹರ್ಫು ಬಂಗಾರಕೋಡಿ, ರೈಫಾನ್ ಪರ್ಲಿಯಾ, ಮುಕ್ಸಿತ್, ಹೈದರ್, ಸಿದ್ದೀಕ್, ನೌಫಲ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಎಸ್ಸೆಸ್ಸೆಲ್ಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಗೌರವಿಸಿ ಬೀಳ್ಕೊಡಲಾಯಿತು. ಇತ್ತೀಚೆಗೆ ನಡೆದ ಮಿನಿ ಒಲಿಂಪಿಕ್ಸ್ ಕೂಟದಲ್ಲಿ ಕಬಡ್ಡಿ ಪಂದ್ಯಾಟದಲ್ಲಿ ಚಿನ್ನದ ಪ್ರಶಸ್ತಿ ಪಡೆದ ವಿದ್ಯಾರ್ಥಿ ಮುಹಮ್ಮದ್ ರಶ್ವಿನ್ ಅವರನ್ನು ಸನ್ಮಾನಿಸಲಾಯಿತು. ಕಬಡ್ಡಿ ಪಟು ವಿದ್ಯಾರ್ಥಿಗಳಿಗೆ ನೀಡಿದ ಜೆರ್ಸಿಯನ್ನು ಈ ಸಂದರ್ಭ ಅತಿಥಿಗಳು ಬಿಡುಗಡೆಗೊಳಿಸಿದರು.
0 comments:
Post a Comment