ಬೆಂಗಳೂರು, ಜನವರಿ 18, 2025 (ಕರಾವಳಿ ಟೈಮ್ಸ್) : ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳ ಮೆಟ್ರಿಕ್ ಪೂರ್ವ (ಪ್ರಿ ಮೆಟ್ರಿಕ್ - 1 ರಿಂದ 8ನೇ ತರಗತಿವರೆಗೆ) ಹಾಗೂ ಮೆಟ್ರಿಕ್ ನಂತರದ (ಮೋಸ್ಟ್ ಮೆಟ್ರಿಕ್ - ಪಿಯುಸಿ ಮೇಲ್ಪಟ್ಟು ಎಲ್ಲ ಪದವಿವರೆಗೆ) ಎಸ್ ಎಸ್ ಪಿ ಶುಲ್ಕ ಮರುಪಾವತಿ ಯೋಜನೆಯ ಆನ್‍ಲೈನ್ ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ 2025 ರ ಜನವರಿ 31ರವರೆಗೆ ವಿಸ್ತರಿಸಿ ಇಲಾಖೆ ಆದೇಶ ಹೊರಡಿಸಿದೆ.
ಅರ್ಹ ಬಾಕಿ ಇರುವ ವಿದ್ಯಾರ್ಥಿಗಳು ಕೊನೆ ದಿನಾಂಕಕ್ಕೆ ಮುಂಚಿತವಾಗಿ ಅರ್ಜಿ ಸಲ್ಲಿಸಿ ಸದುಪಯೋಗ ಪಡೆದುಕೊಳ್ಳಬಹುದು. ಈಗಾಗಲೇ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಮೊತ್ತ ಮಂಜೂರಾತಿಗೆ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.
0 comments:
Post a Comment