ಬಂಟ್ವಾಳ ಶಾಸಕರ ಒಡ್ಡೂರು ಫಾಮ್ರ್ಸ್ ಬಳಿ ಇರುವ ಸಿ.ಎನ್.ಜಿ. ಘಟಕಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ - Karavali Times ಬಂಟ್ವಾಳ ಶಾಸಕರ ಒಡ್ಡೂರು ಫಾಮ್ರ್ಸ್ ಬಳಿ ಇರುವ ಸಿ.ಎನ್.ಜಿ. ಘಟಕಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ - Karavali Times

728x90

2 January 2025

ಬಂಟ್ವಾಳ ಶಾಸಕರ ಒಡ್ಡೂರು ಫಾಮ್ರ್ಸ್ ಬಳಿ ಇರುವ ಸಿ.ಎನ್.ಜಿ. ಘಟಕಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ

ಬಂಟ್ವಾಳ, ಜನವರಿ 02, 2025 (ಕರಾವಳಿ ಟೈಮ್ಸ್) : ಕೇಂದ್ರ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಹ್ಲಾದ ಜೋಶಿ ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಒಡ್ಡೂರು ಫಾರ್ಮ್ಸ್ ಬಳಿ ಇರುವ ಸಿ ಎನ್ ಜಿ ಘಟಕಕ್ಕೆ ಗುರುವಾರ ಬೆಳಿಗ್ಗೆ ಬೇಟಿ ನೀಡಿದರು.

ಘಟಕದ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿದ ಕೇಂದ್ರ ಸಚಿವರು ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ  ಇಂತಹ ಪ್ರಯತ್ನಗಳು ಸಹಕಾರಿಯಾಗಲಿದೆ ಎಂದು ಘಟಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ರಾಜೇಶ್ ನಾಯ್ಕ್ ಹಾಗೂ ಅವರ ಪುತ್ರ ಉನ್ನತ್ ಆರ್ ನಾಯ್ಕ್ ಘಟಕದಲ್ಲಿ ಅಟೋ ಗ್ಯಾಸ್ ಪ್ರಾಯೋಗಿಕ ವಿತರಣೆಗೆ ಅನುಕೂಲ ಕಲ್ಪಿಸಲಾಗಿರುವ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಸಂಸದ ಕ್ಯಾ ಬ್ರಿಜೇಶ್ ಚೌಟ, ಮಂಗಳೂರು ಉತ್ತರ ಶಾಸಕ ವೈ ಭರತ್ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಪ್ರಮುಖರಾದ ಸಂಜಯ್ ಪ್ರಭು, ದೇವದಾಸ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಯತೀಶ್ ಅರ್ವಾರ್, ಸಚಿನ್ ಅಡಪ, ಪವನ್ ಕುಮಾರ್, ರವೀಶ್ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಶಾಸಕರ ಒಡ್ಡೂರು ಫಾಮ್ರ್ಸ್ ಬಳಿ ಇರುವ ಸಿ.ಎನ್.ಜಿ. ಘಟಕಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ Rating: 5 Reviewed By: karavali Times
Scroll to Top