ಸುಳ್ಯ, ಜನವರಿ 22, 2025 (ಕರಾವಳಿ ಟೈಮ್ಸ್) : ಪಾನ್ ಬೀಡಾ ಅಂಗಡಿಯಲ್ಲಿ ನಡೆಯುತ್ತಿದ್ದ ಮಟ್ಕಾ ಜೂಜಾಟ ಕೃತ್ಯ ಬೇಧಿಸಿದ ಸುಳ್ಯ ಪೊಲೀಸರು ನಗದು ಹಾಗೂ ಕೃತ್ಯಕ್ಕೆ ಬಳಸಿದ ಇತರ ಸೊತ್ತುಗಳ ಸಹಿತ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿಯನ್ನು ಸಂಪಾಜೆ ಗ್ರಾಮದ ಕಲ್ಲುಗುಂಡಿ ನಿವಾಸಿ ಮುಹಮ್ಮದ್ ಮುಶ್ತಾಕ್ ಎಂದು ಹೆಸರಿಸಲಾಗಿದೆ. ಕಲ್ಲುಗುಂಡಿ ಪೇಟೆಯ ಚರ್ಚ್ ಬಳಿ ಹೊಟೇಲ್ ಬದಿಯಲ್ಲಿರುವ ಪಾನ್ ಬೀಡ ಅಂಗಡಿಯಲ್ಲಿನ ವ್ಯಕ್ತಿಯು ಜನರಿಂದ ಹಣವನ್ನು ಪಣವಾಗಿರಿಸಿಕೊಂಡು ಮಟ್ಕಾ ಜೂಜಾಟ ನಡೆಸುತ್ತಿರುವ ಬಗ್ಗೆ ಸುಳ್ಯ ಪೆÇಲೀಸ್ ಠಾಣಾ ಪಿಎಸ್ಸೈ ಸಂತೋಷ್ ಬಿ ಪಿ ಅವರಿಗೆ ಸೋಮವಾರ ರಾತ್ರಿ ಬಂದ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಗಳ ಜೊತೆ ದಾಳಿ ನಡೆಸಿದಾಗ ಪಾನ್ ಬೀಡ ಅಂಗಡಿಯಲ್ಲಿದ್ದ ಮುಶ್ತಾಕ್ ನನ್ನು ಕೂಲಂಕೂಷವಾಗಿ ವಿಚಾರಿಸಿದಾಗ ತಾನು ಗಿರಾಕಿಗಳಿಂದ ಹಣವನ್ನು ಪಡೆದು ಮಟ್ಕಾ ಜೂಜಾಟ ನಡೆಸುತ್ತಿರುವ ಬಗ್ಗೆ ತಪ್ಪನ್ನು ಒಪ್ಪಿಕೊಂಡಿರುತ್ತಾನೆ.
ಆರೋಪಿಯ ಬಳಿಯಿದ್ದ ಮಟ್ಕಾ ಜೂಜಾಟ ನಡೆಸಿ ಸಂಗ್ರಹಿಸಿದ ನಗದು ಹಣ, ಮಟ್ಕಾ ಆಡಲು ಬಳಸಿದ ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಸುಳ್ಯ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment