ಮಂಗಳೂರು ಪ್ರೆಸ್ ಕ್ಲಬ್ ಗೌರವ ಸನ್ಮಾನಕ್ಕೆ 5 ಮಂದಿ ಹಿರಿಯ ಪತ್ರಕರ್ತರ ಆಯ್ಕೆ : ಜನವರಿ 26 ರಂದು ಪ್ರಶಸ್ತಿ ಪ್ರದಾನ - Karavali Times ಮಂಗಳೂರು ಪ್ರೆಸ್ ಕ್ಲಬ್ ಗೌರವ ಸನ್ಮಾನಕ್ಕೆ 5 ಮಂದಿ ಹಿರಿಯ ಪತ್ರಕರ್ತರ ಆಯ್ಕೆ : ಜನವರಿ 26 ರಂದು ಪ್ರಶಸ್ತಿ ಪ್ರದಾನ - Karavali Times

728x90

22 January 2025

ಮಂಗಳೂರು ಪ್ರೆಸ್ ಕ್ಲಬ್ ಗೌರವ ಸನ್ಮಾನಕ್ಕೆ 5 ಮಂದಿ ಹಿರಿಯ ಪತ್ರಕರ್ತರ ಆಯ್ಕೆ : ಜನವರಿ 26 ರಂದು ಪ್ರಶಸ್ತಿ ಪ್ರದಾನ

ಮಂಗಳೂರು, ಜನವರಿ 22, 2025 (ಕರಾವಳಿ ಟೈಮ್ಸ್) : ಮಂಗಳೂರು ಪ್ರೆಸ್ ಕ್ಲಬ್ ಇದರ 2024ನೇ ಸಾಲಿನ ಮಂಗಳೂರು ಪ್ರೆಸ್ ಕ್ಲಬ್ ಗೌರವ ಸನ್ಮಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಐದು ಮಂದಿ ಹಿರಿಯ ಪತ್ರಕರ್ತರು  ಆಯ್ಕೆಯಾಗಿದ್ದಾರೆ.

ಭಾಸ್ಕರ ರೈ ಕಟ್ಟ (ಸುದ್ದಿ ಬಿಡುಗಡೆ), ಮುಹಮ್ಮದ್ ಆರೀಫ್ ಪಡುಬಿದ್ರೆ (ವಿಜಯ ಕರ್ನಾಟಕ),  ರಘರಾಮ ನಾಯಕ್  (ಹೊಸದಿಗಂತ), ಜಿತೇಂದ್ರ ಕುಂದೇಶ್ವರ (ವಿಶ್ವವಾಣಿ)  ಹಾಗೂ ಪತ್ರಿಕಾ ಛಾಯಾಗ್ರಾಹಕ ಸತೀಶ್ ಇರಾ  (ಉದಯವಾಣಿ) ಇವರು ಗೌರವ ಸನ್ಮಾನಕ್ಕೆ ಆಯ್ಕೆಯಾದ ಹಿರಿಯ ಪತ್ರಕರ್ತರು. ಗೌರವ ಪುರಸ್ಕಾರ 10 ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆ ಒಳಗೊಂಡಿದೆ.

ಜನವರಿ 26 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು ಮೋರ್ಗನ್ಸ್ ಗೇಟ್ ಬಳಿಯ “ಪಾಲೆಮಾರ್ ಗಾರ್ಡನ್” ನಲ್ಲಿ ನಡೆಯಲಿರುವ ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆಯಲ್ಲಿ ಗೌರವ ಸನ್ಮಾನ ಪ್ರದಾನ ಮಾಡಲಾಗುವುದು ಎಂದು ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ಪ್ರೆಸ್ ಕ್ಲಬ್ ಗೌರವ ಸನ್ಮಾನಕ್ಕೆ 5 ಮಂದಿ ಹಿರಿಯ ಪತ್ರಕರ್ತರ ಆಯ್ಕೆ : ಜನವರಿ 26 ರಂದು ಪ್ರಶಸ್ತಿ ಪ್ರದಾನ Rating: 5 Reviewed By: karavali Times
Scroll to Top