ಸಾಹಿತ್ಯದ ಬಗೆಗಿನ ಆಸಕ್ತಿ ಹಾದಿ ತಪ್ಪಿಸುವುದಿಲ್ಲ : ಬಿಂದಿಯಾ ನಾಯಕ್ ಅಭಿಮತ - Karavali Times ಸಾಹಿತ್ಯದ ಬಗೆಗಿನ ಆಸಕ್ತಿ ಹಾದಿ ತಪ್ಪಿಸುವುದಿಲ್ಲ : ಬಿಂದಿಯಾ ನಾಯಕ್ ಅಭಿಮತ - Karavali Times

728x90

19 January 2025

ಸಾಹಿತ್ಯದ ಬಗೆಗಿನ ಆಸಕ್ತಿ ಹಾದಿ ತಪ್ಪಿಸುವುದಿಲ್ಲ : ಬಿಂದಿಯಾ ನಾಯಕ್ ಅಭಿಮತ

ಬಂಟ್ವಾಳ, ಜನವರಿ 19, 2025 (ಕರಾವಳಿ ಟೈಮ್ಸ್) : ಸಾಹಿತ್ಯದ ಬಗೆಗಿನ ಆಸಕ್ತಿಯು ಹಾದಿ ತಪ್ಪಿಸುವುದಿಲ್ಲ. ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲುಗಳ ಮೂಲಕವೇ ನಮಗೆ ಬೇಕಾದ ಪುಸ್ತಗಳನ್ನು ಓದಬಹುದು. ಸಾಹಿತ್ಯದ ಅಧ್ಯಯನ ನಮ್ಮ ಅಂಗೈಯಲ್ಲೇ ಸಾಧ್ಯ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿಂದಿಯಾ ನಾಯಕ್ ಹೇಳಿದರು. 

ಪಾಣೆಮಂಗಳೂರಿನ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕದಿಂದ ನಡೆದ ಸಾಹಿತ್ಯ ಸಂಭ್ರಮ-8 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಸಾಹಿತಿ ಹಾಗೂ ಮುಖ್ಯ ಶಿಕ್ಷಕ ಜಯರಾಮ ಪಡ್ರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿಲಯದ ಮೇಲ್ವಿಚಾರಕ ವಿಶ್ವನಾಥ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾದ ಗೋಪಾಲಕೃಷ್ಣ ನೇರಳಕಟ್ಟೆ ಕವನ ರಚನೆಯ ಬಗ್ಗೆ ಮತ್ತು ತುಳಸಿ ಕೈರಂಗಳ ಕಥಾ ರಚನೆಯ ಬಗ್ಗೆ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಿಕೊಟ್ಟರು.

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಘಟಕಾಧ್ಯಕ್ಷೆ ಶ್ರೀಕಲಾ ಕಾರಂತ್ ಸ್ವಾಗತಿಸಿ, ಪ್ರಸ್ತಾವನೆಗೈದರು. ವಿದ್ಯಾರ್ಥಿನಿಲಯದ ಸಿಬ್ಬಂದಿ ರಮೇಶ ವಂದಿಸಿ, ಮಕ್ಕಳ ಸಾಹಿತ್ಯ ಪರಿಷತ್ ಜತೆ ಕಾರ್ಯದರ್ಶಿ ರಶ್ಮಿತಾ ಸುರೇಶ್ ಜೋಗಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಸಾಹಿತ್ಯದ ಬಗೆಗಿನ ಆಸಕ್ತಿ ಹಾದಿ ತಪ್ಪಿಸುವುದಿಲ್ಲ : ಬಿಂದಿಯಾ ನಾಯಕ್ ಅಭಿಮತ Rating: 5 Reviewed By: karavali Times
Scroll to Top