ಮೈಸೂರು, ಜನವರಿ 11, 2025 (ಕರಾವಳಿ ಟೈಮ್ಸ್) : ಅತಾಯೆ ರಸೂಲ್ ಮೂವ್ ಮೆಂಟ್ ಮೈಸೂರು ಇದರ ಆಶ್ರಯದಲ್ಲಿ ಪ್ರತಿ ವರ್ಷ ಆಚರಿಸಿಕೊಂಡು ಬರುವ ಹಝ್ರತ್ ಖ್ವಾಜಾ ಮುಯೀನುದ್ದೀನ್ ಚಿಸ್ತಿಯ್ಯಿಲ್ ಅಜ್ಮೀರಿ (ರ) ಅವರ ಅನುಸ್ಮರಣೆ “ಖ್ವಾಜಾ ಕೀ ಛಟ್ಟಿ” ಕಾರ್ಯಕ್ರಮವು ಇಲ್ಲಿನ ಗೌಸಿಯಾ ನಗರದ ಎ ಬ್ಲಾಕ್, ಟಿ ಸಿ ಗಲ್ಲಿಯ ಆಸ್ತಾನೆ ಖ್ವಾಜಾ ಇಲ್ಲಿ ಇತ್ತೀಚೆಗೆ ನಡೆಯಿತು.
ಖ್ವಾಜಾ ಅಝೀಂ ಅಲಿ ಶಾ ಚಿಶ್ತೀ ಮೈಸೂರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ, ಗರೀಬ್ ನವಾಬ್ ಸಮ್ಮೇಳನ, ಪ್ರಾರ್ಥನಾ ಮಜ್ಲಿಸ್ ಬಳಿಕ ಅನ್ನದಾನ ಕಾರ್ಯಕ್ರಮಗಳು ನಡೆಯಿತು.
ಖ್ವಾಜಾ ಬಲ್ಹರಿ ಅಲಿ ಶಾ ಚಿಶ್ತಿ ದುವಾಶಿರ್ವಚನಗೈದರು. ಹಝ್ರತ್ ಐಜಾಝ್ ಮಸ್ತಾನ್ ಶಾ ಹಾಫೀಝ್ ಖಾದ್ರಿ, ಹಝ್ರತ್ ಶೈಖ್ ಝುಬೈರ್ ಷಾ ಚಿಶ್ತಿ ಉಲ್ ಖಾದ್ರಿ, ಹಝ್ರತ್ ಸಯ್ಯದ್ ನವೀದ್ ಷಾ ಖಾದ್ರಿ, ಹಝ್ರತ್ ನಸ್ರುಲ್ಲಾ ಷಾ ಖಾದ್ರಿ, ಹಝ್ರತ್ ಮಹಬೂಬ್ ಶಾ ಚಿಶ್ತಿ ಸಹಿತ ಸೂಫಿ ಸಂತರು, ಉಲಮಾಗಳು, ಶರಣ ಸಂತರು, ರಾಜಕೀಯ ನೇತಾರರು ಭಾಗವಹಿಸಿದ್ದರು.
0 comments:
Post a Comment