ಕಡಬ, ಜನವರಿ 09, 2025 (ಕರಾವಳಿ ಟೈಮ್ಸ್) : ಕಡಬ ಬ್ಲಾಕ್ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಅವರು, ಅಸಂಘಟಿತ ಕಾರ್ಮಿಕರು ಸ್ವಾತಂತ್ರ್ಯ ಬಂದಾವಾಗಿಂದ ಇವತ್ತಿನವರೆಗೂ ಕಾಂಗ್ರೆಸ್ ಪಕ್ಷದ ಪರವಾಗಿ ನಿಂತಿದ್ದಾರೆ. ಆದ್ದರಿಂದ ಅವರು ಯಾವುದೇ ಸೌಲಭ್ಯಗಳಿಂದ ವಂಚಿತರಾಗದಂತೆ ಮತ್ತು ವಿಶೇಷವಾಗಿ ಅಸಂಘಟಿತ ಕಾರ್ಮಿಕರು ಪಂಚ ಗ್ಯಾರಂಟಿ ಯೋಜನೆಯಿಂದ ಹೊರಗೆ ಉಳಿಯದಂತೆ ನಾವೆಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದರು.
ಕಡಬ ಬ್ಲಾಕ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಸುದರ್ಶನ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿರಂಜನ ರೈ, ಪ್ರಮುಖರಾದ ಸರ್ವೋತ್ತಮ ಗೌಡ, ಅಬ್ದುಲ್ ಸಮದ್ ಸೋಂಪಾಡಿ, ಶರೀಫ್ ಎ ಎಸ್, ಮಹಮ್ಮದ್ ಹನೀಫ್, ಎ ಕೆ ಬಶೀರ್, ಶಿವಪ್ರಸಾದ್, ಫಝಲ್ ಕೋಡಿಂಬಾಳ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಸಮಿತಿಯ ಪ್ರಮುಖರಾದ ಸತೀಶ್ ನಾಯಕ್, ಅಬ್ದುಲ್ ಗಫಾರ್, ಅಲೋಶಿಯಸ್, ಶಂಸುದ್ದೀನ್, ರಝಾಕ್ ಮಾಯಗಲ್, ಹಮೀದ್ ಮಾಂತೂರು, ಜತಿನ್ ಎಸ್ ನಾಯಕ್, ಪ್ರಶಾಂತ್ ಗೌಡ, ವೆಂಕಪ್ಪಗೌಡ, ಲತೀಫ್ ಅತೂರು, ಅಬ್ದುಲ್ ಹಮೀದ್, ಹೇಮಂತ್, ಜಯಂತ್ ಬಾಂಬಿಲಾ, ಮಂಜುನಾಥ್, ಗುರುಪ್ರಸಾದ್, ಕೃಷ್ಣಪ್ಪಗೌಡ, ಸಿದ್ದಾರ್ಥ್ ಬಿ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment