ಕಡಬ, ಜನವರಿ 13, 2025 (ಕರಾವಳಿ ಟೈಮ್ಸ್) : ಮನೆ ಮಂದಿ ಪ್ರಾರ್ಥನೆಗೆಂದು ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವುಗೈದ ಘಟನೆ ನೆಕ್ಕಿಲಾಡಿ ಗ್ರಾಮದ ಮರ್ಧಾಳ ಎಂಬಲ್ಲಿ ಭಾನುವಾರ ಸಂಜೆ ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿ ಕುರಿಯ ಕೋಸ್ ಅಲಿಯಾಸ್ ಜೇಮ್ಸ್ (61) ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದ್ದು, ಇವರು ಭಾನುವಾರ (ಜನವರಿ 12) ಪತ್ನಿ ಹಾಗೂ ಮಗನೊಂದಿಗೆ ಪ್ರಾರ್ಥನೆಯ ಬಗ್ಗೆ ತೆರಳುವರೇ ಮನೆಗೆ ಬೀಗ ಹಾಕಿ, ಬೆಳಿಗ್ಗೆ ಹೊರಟು ನಂತರ ಪ್ರಾರ್ಥನೆ ಮುಗಿಸಿ ಸಾಯಂಕಾಲ ಮನೆಗೆ ಬಂದಾಗ ಮನೆಯ ಒಳಗಡೆ ಬೆಡ್ ರೂಮ್ ನಲ್ಲಿದ್ದ ಗೋದ್ರೆಜ್ ಬಾಗಿಲು ತೆರೆದಿದ್ದು, ಗೋದ್ರೆಜ್ ಒಳಗೆ ಇಟ್ಟಿದ್ದ ಸುಮಾರು 2.66 ಲಕ್ಷ ರೂಪಾಯಿ ಮೌಲ್ಯದ ಒಟ್ಟು 76 ಗ್ರಾಂ ಚಿನ್ನಾಭರಣಗಳು ಹಾಗೂ 1 ಲಕ್ಷ ರೂಪಾಯಿ ನಗದು ಕಳವು ಆಗಿರುವುದು ಬೆಳಕಿಗೆ ಬಂದಿದೆ. ಮನೆಯ ಹಿಂದಿನ ಬಾಗಿಲನ್ನು ಒಡೆದು ಒಳಗೆ ಪ್ರವೇಶಿಸಿದ ಕಳ್ಳರು ಈ ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಈ ಬಗ್ಗೆ ಕಡಬ ಪೆÇಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment