ಬಂಟ್ವಾಳ, ಜನವರಿ 09, 2025 (ಕರಾವಳಿ ಟೈಮ್ಸ್) : ಕಳ್ಳಿಗೆ ಗುತ್ತು ಧರ್ಮಚಾವಡಿ ಶ್ರೀ ಕನಪಾಡಿತ್ತಾಯ, ಧೂಮಾವತಿ ಬಂಟ ಹಾಗೂ ಪರಿವಾರ ದೈವಗಳ ಧರ್ಮ ನೇಮೋತ್ಸವವು ಜನವರಿ 31 ರಂದು ಶುಕ್ರವಾರ ಹಾಗೂ ಫೆಬ್ರವರಿ 1 ರಂದು ಶನಿವಾರ ಕಳ್ಳಿಗೆ ಗುತ್ತು ಮನೆಯ ಪರಿವಾರ ದೈವಗಳಿಗೆ ಕೋಲೋತ್ಸವ ಕಳ್ಳಿಗೆ ಗುತ್ತು ಚಾವಡಿಯಲ್ಲಿ ನಡೆಯಲಿದೆ.
ಬ್ರಹ್ಮಶ್ರೀ ವೇದಮೂರ್ತಿ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಮಾಜಿ ಸಚಿವ, ಕಳ್ಳಿಗೆಗುತ್ತು ಬೆಳ್ಳಿಪ್ಪಾಡಿ ಬಿ ರಮಾನಾಥ ರೈ ಹಾಗೂ ಕಳ್ಳಿಗೆಗುತ್ತು ಬೆಳ್ಳಿಪ್ಪಾಡಿ ರಾಜಶೇಖರ ರೈ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment