ಬಂಟ್ವಾಳ, ಜನವರಿ 09, 2025 (ಕರಾವಳಿ ಟೈಮ್ಸ್) : ಬಿ ಸಿ ರೋಡಿನಿಂದ ಅಡ್ಡಹೊಳೆವರೆಗೆ ಸಾಗುತ್ತಿರುವ ಹೆದ್ದಾರಿ ಚತುಷ್ಪಥ ಕಾಮಗಾರಿಯನ್ನು ಮಾಣಿಯಿಂದ ಬಿ ಸಿ ರೋಡುವರೆಗೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಶುಕ್ರವಾರ ವೀಕ್ಷಿಸಿ ಪರಿಶೀಲನೆ ನಡೆಸಿ ಕಾಮಗಾರಿ ಕಂಪೆನಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಮಾಣಿಯಿಂದ ಬಿ ಸಿ ರೋಡುವರೆಗಿನ ಶೇ 95 ರಷ್ಟು ಕಾಮಗಾರಿ ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದ ಜಿಲ್ಲಾಧಿಕಾರಿ ಬೋಳಂಗಡಿ ನರಹರಿ ಪರ್ವತ ಬಳಿ ಸಹಿತ ಕೆಲ ಭಾಗಗಳ ಕಾಮಗಾರಿ ಮಾತ್ರ ಒಂದಷ್ಟು ವಿಳಂಬವಾಗಲಿದೆ ಎಂದರು. ಕಾಮಗಾರಿ ಗುತ್ತಿಗೆ ಸಂಸ್ಥೆ ಕೆ ಎನ್ ಆರ್ ಸಂಸ್ಥೆಯ ಅಧಿಕಾರಿಗಳು ಸ್ಥಳದಲ್ಲಿದ್ದು ಡೀಸಿ ಅವರಿಗೆ ಸೂಕ್ತ ವಿವರ ನೀಡಿದರು. ಈ ಸಂದರ್ಭ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಸಹಿತ ಕಂದಾಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಜೊತೆಗಿದ್ದರು.
0 comments:
Post a Comment