ಮಸೀದಿಗಳಲ್ಲಿ ವಕ್ಫ್ ಅಧಿಕಾರಿಗಳು ಅಧಿಕೃತವಾಗಿ ರಚಿಸಿದ ಸಮಿತಿಗೆ ಬೆಲೆ ನೀಡದೆ ಅಧ್ಯಕ್ಷರುಗಳ ಸರ್ವಾಧಿಕಾರಿ ಧೋರಣೆಯಂತೆ ಡಮ್ಮಿ ಸಮಿತಿ ರಾಜ್ಯಭಾರದ ಆರೋಪ : ಕ್ರಮ ಕೈಗೊಳ್ಳದ ಅಧಿಕಾರಿ ವಿರುದ್ದ ಡೀಸಿಗೆ ದೂರು - Karavali Times ಮಸೀದಿಗಳಲ್ಲಿ ವಕ್ಫ್ ಅಧಿಕಾರಿಗಳು ಅಧಿಕೃತವಾಗಿ ರಚಿಸಿದ ಸಮಿತಿಗೆ ಬೆಲೆ ನೀಡದೆ ಅಧ್ಯಕ್ಷರುಗಳ ಸರ್ವಾಧಿಕಾರಿ ಧೋರಣೆಯಂತೆ ಡಮ್ಮಿ ಸಮಿತಿ ರಾಜ್ಯಭಾರದ ಆರೋಪ : ಕ್ರಮ ಕೈಗೊಳ್ಳದ ಅಧಿಕಾರಿ ವಿರುದ್ದ ಡೀಸಿಗೆ ದೂರು - Karavali Times

728x90

20 January 2025

ಮಸೀದಿಗಳಲ್ಲಿ ವಕ್ಫ್ ಅಧಿಕಾರಿಗಳು ಅಧಿಕೃತವಾಗಿ ರಚಿಸಿದ ಸಮಿತಿಗೆ ಬೆಲೆ ನೀಡದೆ ಅಧ್ಯಕ್ಷರುಗಳ ಸರ್ವಾಧಿಕಾರಿ ಧೋರಣೆಯಂತೆ ಡಮ್ಮಿ ಸಮಿತಿ ರಾಜ್ಯಭಾರದ ಆರೋಪ : ಕ್ರಮ ಕೈಗೊಳ್ಳದ ಅಧಿಕಾರಿ ವಿರುದ್ದ ಡೀಸಿಗೆ ದೂರು

ಮಂಗಳೂರು, ಜನವರಿ 19, 2025 (ಕರಾವಳಿ ಟೈಮ್ಸ್) : ವಕ್ಫ್ ನೋಂದಾಯಿತ ಮಸೀದಿಗಳಲ್ಲಿ ಅಧಿಕೃತ ಚುನಾವಣೆಗಳಲ್ಲಿ ರಚಿಸಲ್ಪಟ್ಟ ಸಮಿತಿಗೆ ಬೆಲೆಯೇ ಇಲ್ಲದಂತಾಗಿದ್ದು, ಅಧ್ಯಕ್ಷರುಗಳ ಸರ್ವಾಧಿಕಾರಿ ಧೋರಣೆಯಿಂದ ವಕ್ಫ್ ಕಚೇರಿಯ ಅಧಿಕೃತ ಮುದ್ರೆ ಇಲ್ಲದೆ ಅನಧಿಕೃತವಾಗಿ ಇತರ ಸದಸ್ಯರುಗಳನ್ನು ನೇಮಿಸಿಕೊಂಡು ರಾಜ್ಯಭಾರ ನಡೆಸುತ್ತಿರುವ ಬಗ್ಗೆ ಆಕ್ರೋಶಗೊಂಡಿರುವ ಮಸೀದಿಗೆ ಸಂಬಂಧಪಟ್ಟವರು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಅಧಿಕಾರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ದೂರಿದ್ದಾರೆ. 

ಅಧಿಕೃತವಾಗಿ ವಕ್ಪ್ ನೋಂದಾಯಿತ ಆಡಳಿತ ಸಮಿತಿಯಲ್ಲಿ 11 ಜನ ಸದಸ್ಯರಿರುತ್ತಾರೆ. ಅದರೆ ಈ ಅಧಿಕೃತ ಸಮಿತಿ ನೈಜವಾಗಿ ಕಾರ್ಯನಿರ್ವಹಿಸದೆ ಅಧ್ಯಕ್ಷರಾದವರು ಹಾಗೂ ಕೆಲವೊಂದು ಪ್ರಭಾವಿಗಳು ಸೇರಿ ಅಧಿಕೃತ ಸಮಿತಿ ಹೊರತುಪಡಿಸಿ ಸಮಿತಿಗೆ ಇತರ ಹೆಚ್ಚುವರಿ ಸದಸ್ಯರುಗಳನ್ನು ನೇಮಿಸಿಕೊಂಡು ಕಾನೂನು ಬಾಹಿರವಾಗಿ ಅಧಿಕಾರವನ್ನು ಸರ್ವಾಧಿಕಾರಿ ಧೋರಣೆಯಿಂದ ನಡೆಸಲಾಗುತ್ತಿದೆ ಎಂದು ದೂರಲಾಗಿದೆ. 

ಕೆಲವು ಮಸೀದಿಗಳಲ್ಲಿ ಹೆಸರಿಗೆ ಮಾತ್ರ ವಕ್ಪ್ ನೋಂದಯಿತ ಸಮಿತಿ ರಚನೆಯಾಗಿರುತ್ತದೆ. ವಕ್ಪ್ ಇಲಾಖೆಗೆ ನೋಂದಾವಣೆಗೊಂಡಿದ್ದರೂ ವಕ್ಪ್ ನಿಯಮಾವಳಿಯಂತೆ ಈ ಮಸೀದಿಗಳಲ್ಲಿ ಆಡಳಿತ ಹಾಗೂ ಕಾರ್ಯಚಟುವಟಿಕೆಗಳು ನಡೆಯುತ್ತಿಲ್ಲ ಎಂಬುದು ಕೆಲ ಸದಸ್ಯರ ವಾದವಾಗಿದೆ. 

ಈ ಕಾರಣಕ್ಕಾಗಿ ವಕ್ಫ್ ಅಧಿಕಾರಿಗಳು ಈ ಬಗ್ಗೆ ಎಲ್ಲಾ ಮಸೀದಿಗಳಿಗೂ ಅಧಿಕೃತ ಆದೇಶ ಮಾಡಬೇಕಾಗಿದ್ದು, ವಕ್ಫ್ ಇಲಾಖೆ ಅಧಿಕೃತವಾಗಿ ನೇಮಿಸಿದ ಆಡಳಿತ ಸಮಿತಿಯೇ ನೈಜ ಆಡಳಿತ ನಡೆಸುತ್ತಿದೆಯೇ ಅಥವಾ ಬಾಹ್ಯ ವ್ಯಕ್ತಿಗಳು ಅನಧಿಕೃತವಾಗಿ ನೇಮಕಗೊಂಡು ಪರೋಕ್ಷ ಆಡಳಿತ ನಡೆಸುತ್ತಿದೆಯೇ ಎಂಬುದನ್ನು ಸ್ವತಃ ವಕ್ಫ್ ಅಧಿಕಾರಿಗಳು ಪ್ರತಿ ಮಸೀದಿಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸುವ ಅಗತ್ಯ ಇದೆ ಎಂದು ಆಗ್ರಹಿಸಲಾಗುತ್ತಿದೆ. ಕೇವಲ ಕಡತ ಪರಿಶೀಲನೆ ನಡೆಸಿದ ಮಾತ್ರಕ್ಕೆ ಸತ್ಯ ಗೊತ್ತಾಗುವುದಿಲ್ಲ. ಕಡತ ಪರಿಶೀಲನೆ ಜೊತೆಗೆ ಮಸೀದಿ ಆಡಳಿತ ಸಮಿತಿಗಳ ಸಭೆ ಸಂದರ್ಭ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುವ ಅಗತ್ಯ ಇದೆ. ಕಾರಣ ಸಭೆಯ ಸಂದರ್ಭ ಸದಸ್ಯರುಗಳ ಸಹಿ ಸಂಗ್ರಹಕ್ಕೆ ಎರಡೆರಡು ಪುಸ್ತಕಗಳನ್ನು ನೀಡಿ ವಕ್ಫ್ ಇಲಾಖೆ ಅಧಿಕೃತವಾಗಿ ನೇಮಿಸಿರುವ ನೈಜ ಸದಸ್ಯರುಗಳನ್ನೇ ವಂಚಿಸಲಾಗುತ್ತಿದೆ ಎಂಬ ಗಂಭೀರ ಆರೋಪಗಳನ್ನೂ ಮಾಡಲಾಗುತ್ತಿದೆ. ಇಂತಹ ಘಟನೆ ಬಗ್ಗೆ ಇತ್ತೀಚೆಗೆ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪರ್ತಿಪ್ಪಾಡಿ ಮಸೀದಿಯಲ್ಲಿ ನಡೆದ ಅನಧಿಕೃತ ಸಮಿತಿ ಸದಸ್ಯರುಗಳ ನೇಮಕದ ಬಗ್ಗೆ ಅಧಿಕೃತ ಸದಸ್ಯರೆನಿಸಿಕೊಂಡವರು ಜಿಲ್ಲಾ ವಕ್ಫ್ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿರುವ ಘಟನೆಯನ್ನು ಈ ಸಂದರ್ಭ ಉಲ್ಲೇಖಿಸಬಹುದು. 

  • Blogger Comments
  • Facebook Comments

0 comments:

Post a Comment

Item Reviewed: ಮಸೀದಿಗಳಲ್ಲಿ ವಕ್ಫ್ ಅಧಿಕಾರಿಗಳು ಅಧಿಕೃತವಾಗಿ ರಚಿಸಿದ ಸಮಿತಿಗೆ ಬೆಲೆ ನೀಡದೆ ಅಧ್ಯಕ್ಷರುಗಳ ಸರ್ವಾಧಿಕಾರಿ ಧೋರಣೆಯಂತೆ ಡಮ್ಮಿ ಸಮಿತಿ ರಾಜ್ಯಭಾರದ ಆರೋಪ : ಕ್ರಮ ಕೈಗೊಳ್ಳದ ಅಧಿಕಾರಿ ವಿರುದ್ದ ಡೀಸಿಗೆ ದೂರು Rating: 5 Reviewed By: karavali Times
Scroll to Top