ಬಂಟ್ವಾಳ, ಜನವರಿ 31, 2024 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭೆಯಿಂದ ಬೀದಿ ವ್ಯಾಪಾರಸ್ಥರೆಂದು ಈಗಾಗಲೇ ಗುರುತುಚೀಟಿ ಪಡಕೊಂಡವರನ್ನು ಹೊರತುಪಡಿಸಿ ಹಾಗೂ ಬೀದಿ ಬದಿ ಪ್ಯಾಪಾರಿಗಳಾಗಿ ಗುರುತು ಚೀಟಿ ಪಡೆಯದೇ ವ್ಯಾಪಾರ ಮಾಡುತ್ತಿರುವವರು ಪುರಸಭೆಯ ಗುರುತು ಚೀಟಿ ಪಡಕೊಳ್ಳತಕ್ಕದ್ದು. ಎಲ್ಲಾ ಗುರುತು ಚೀಟಿ ಪಡಕೊಂಡ ಬೀದಿಬದಿ ವ್ಯಾಪಾರಸ್ಥರು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ರೀತಿಯಲ್ಲಿ ಮತ್ತು ಸಾರ್ವಜನಿಕರು ನಡೆದುಕೊಂಡು ಹೋಗುವ ಫುಟ್ ಪಾತ್ ಗಳನ್ನು ಅತಿಕ್ರಮಿಸದೇ ವಾಹನ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ವ್ಯಾಪಾರ ಮಾಡತಕ್ಕದ್ದು. ಇದನ್ನು ಉಲ್ಲಂಘಿಸಿ ವ್ಯಾಪಾರ ಮಾಡುತ್ತಿರುವುದು ಕಂಡು ಬಂದಲ್ಲಿ ಪುರಸಭೆಯ ವತಿಯಿಂದ ತೆರವು ಕಾರ್ಯಾಚರಣೆ ನಡೆಸುವುದು ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಯಾವುದೇ ಬ್ಯಾನರ್ ಅಳಡಿಸಲು ಕಡ್ಡಾಯವಾಗಿ ಅನುಮತಿ ಪಡೆಯತಕ್ಕದ್ದು ಮತ್ತು ಬಟ್ಟೆಯಿಂದ ನಿರ್ಮಿಸಿದ ಬ್ಯಾನರ್ ಮಾತ್ರ ಅಳವಡಿಸಲು ಅವಕಾಶ ಇರುತ್ತದೆ. ತಪ್ಪಿದಲ್ಲಿ ಯಾವುದೇ ಸೂಚನೆ ನೀಡದೆ ಬ್ಯಾನರ್ ಗಳನ್ನು ತೆರವುಗೊಳಿಸಲಾಗುವುದು ಎಂದು ಪುರಸಭಾಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
31 January 2025
- Blogger Comments
- Facebook Comments
Subscribe to:
Post Comments (Atom)
0 comments:
Post a Comment