ಆಂಶಿಕ ಅನುದಾನ ಮಂಜೂರಾಗಿ ಟೆಂಟರ್ ಪ್ರಕ್ರಿಯೆ ಮುಗಿದರೂ ಆರಂಭಗೊಳ್ಳದ ಅಡ್ಡೂರು ಸೇತುವೆ ದುರಸ್ತಿ ಕಾಮಗಾರಿ : ಬೆಂಗಳೂರಿನ ಭರವಸೆಗಳ ಸಮಿತಿ ಸಭೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅಸಮಾಧಾನ - Karavali Times ಆಂಶಿಕ ಅನುದಾನ ಮಂಜೂರಾಗಿ ಟೆಂಟರ್ ಪ್ರಕ್ರಿಯೆ ಮುಗಿದರೂ ಆರಂಭಗೊಳ್ಳದ ಅಡ್ಡೂರು ಸೇತುವೆ ದುರಸ್ತಿ ಕಾಮಗಾರಿ : ಬೆಂಗಳೂರಿನ ಭರವಸೆಗಳ ಸಮಿತಿ ಸಭೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅಸಮಾಧಾನ - Karavali Times

728x90

22 January 2025

ಆಂಶಿಕ ಅನುದಾನ ಮಂಜೂರಾಗಿ ಟೆಂಟರ್ ಪ್ರಕ್ರಿಯೆ ಮುಗಿದರೂ ಆರಂಭಗೊಳ್ಳದ ಅಡ್ಡೂರು ಸೇತುವೆ ದುರಸ್ತಿ ಕಾಮಗಾರಿ : ಬೆಂಗಳೂರಿನ ಭರವಸೆಗಳ ಸಮಿತಿ ಸಭೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅಸಮಾಧಾನ

ಬೆಂಗಳೂರು, ಜನವರಿ 22, 2025 (ಕರಾವಳಿ ಟೈಮ್ಸ್) : ಪೊಳಲಿ ಸಮೀಪದ ಅಡ್ಡೂರು ಸೇತುವೆ ಶಿಥಿಲಗೊಂಡಿದ್ದು, ಈ ಸೇತುವೆ ದುರಸ್ಥಿಗೆ ಈಗಾಗಲೇ ಸರಕಾರದಿಂದ 6 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಇದುವರೆಗೂ ಕಾಮಗಾರಿ ಕೈಗೆತ್ತಿಕೊಳ್ಳದಿರುವ ಬಗ್ಗೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರಿನ ಶಾಸಕ ಭವನ-5 ರಲ್ಲಿ ಕರ್ನಾಟಕ ವಿಧಾನ ಸಭೆ ಸಚಿವಾಲಯ ಭರವಸೆಗಳ ಸಮಿತಿ ಅಧ್ಯಕ್ಷ ಕೆ ವೈ ನಂಜೇಗೌಡ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಭರವಸೆಗಳ ಬಗ್ಗೆ ನಡೆದ ಸಭೆಯಲ್ಲಿ ಅಡ್ಡೂರು ಸೇತುವೆ ದುರಸ್ಥಿ ಕುರಿತು ಅವರು ಅಧಿಕಾರಿಗಳ ಜೊತೆ ಚರ್ಚಿಸಿದ ಅವರು, ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. 

ಅಡ್ಡೂರು ಸೇತವೆ ಶಿಥಿಲಗೊಂಡಿರುವುದರಿಂದ ಕಳೆದ ಆಗಸ್ಟ್‍ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರು ಈ ಸೇತುವೆಯಲ್ಲಿ ಬಸ್ಸು ಸೇರಿದಂತೆ ಘನ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ. ಬಸ್ಸು ಸಂಚಾರವಿಲ್ಲದೆ ನಿತ್ಯವೂ ಶಾಲಾ-ಕಾಲೇಜು, ಕೆಲಸ-ಕಾರ್ಯಗಳಿಗೆ ತೆರಳುವವರಿಗೆ ಹಾಗೂ ಪ್ರಸಿದ್ದ ಪೊಳಲಿ ರಾಜಾರಾಜೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಮತ್ತು ಸ್ಥಳೀಯ ಪರಿಸರದವರಿಗೆ ತೊಂದರೆಯಾಗಿರುತ್ತದೆ. ಈ ಸೇತುವೆಯ ಪುನರ್ ನಿರ್ಮಾಣಕ್ಕೆ 50 ಕೋಟಿ ರೂಪಾಯಿ ಅನುದಾನದ ಅಗತ್ಯವಿದ್ದು, ತಕ್ಷಣದ ಪರಿಹಾರಕ್ಕಾಗಿ ಸೇತುವೆ ದುರಸ್ಥಿಗೊಳಿಸಲು ಸರಕಾರದಿಂದ 6 ಕೋಟಿ ರೂಪಾಯಿ ಅನುದಾನ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಮುಗಿದರು ಕಾಮಗಾರಿ ಆರಂಭಕ್ಕೆ ವಿಳಂಬಗೊಳಿಸುತ್ತಿರುವ ಬಗ್ಗೆ ಸಮಿತಿ ಸಭೆಯಲ್ಲಿ ಶಾಸಕ ನಾಯಕ್ ಅಸಮಧಾನ ವ್ಯಕ್ತಪಡಿಸಿದರು. 

ಶಾಸಕ ರಾಜೇಶ್ ನಾಯ್ಕ್ ಅವರು ಸಭೆಯಲ್ಲಿ ತಿಳಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸಿ ಸತ್ಯನಾರಾಯಣ ಅವರು ಅಡ್ಡೂರು ಸೇತುವೆಯ ದುರಸ್ಥಿ ಕಾಮಗಾರಿಯನ್ನು ಮುಂದಿನ ಮೂರು ದಿನಗಳೊಳಗೆ ಆರಂಭಿಸಲಾಗುವುದು. ಹಾಗೂ ಈ ಸೇತುವೆಯ ಪುನರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ 50 ಕೋಟಿ ಅನುದಾನ ಮಂಜೂರಾತಿಗೆ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗುತ್ತದೆ ಎಂದರು. 

ಸಭೆಯಲ್ಲಿ ಕರ್ನಾಟಕ ವಿಧಾನ ಸಭೆ ಸಚಿವಾಲಯ ಭರವಸೆಗಳ ಸಮಿತಿ ಅಧೀನ ಕಾರ್ಯದರ್ಶಿ ಎಸ್ ರಾಜಣ್ಣ, ಲೋಕೋಪಯೋಗಿ ಇಲಾಖೆ ಐಎಫ್‍ಎ ಡಾ ಸೋಮನಾಥ್, ಕೆ ಆರ್ ಡಿ ಸಿ ಎಲ್ ವ್ಯವಸ್ಥಾಪಕ ನಿರ್ದೇಶಕ ಲಿಂಗಮೂರ್ತಿ ಜಿ, ರಾಜ್ಯ ಹೆದ್ಧಾರಿ ಯೋಜನಾ ನಿರ್ದೇಶಕ ಜಗನ್ನಾಥ ಹಾಗೂ ಶಿವಮೊಗ್ಗ ಸರ್ಕಲ್ ಮತ್ತು ಮಂಗಳೂರು ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಆಂಶಿಕ ಅನುದಾನ ಮಂಜೂರಾಗಿ ಟೆಂಟರ್ ಪ್ರಕ್ರಿಯೆ ಮುಗಿದರೂ ಆರಂಭಗೊಳ್ಳದ ಅಡ್ಡೂರು ಸೇತುವೆ ದುರಸ್ತಿ ಕಾಮಗಾರಿ : ಬೆಂಗಳೂರಿನ ಭರವಸೆಗಳ ಸಮಿತಿ ಸಭೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅಸಮಾಧಾನ Rating: 5 Reviewed By: karavali Times
Scroll to Top