ಬಂಟ್ವಾಳ, ಜನವರಿ 04, 2025 (ಕರಾವಳಿ ಟೈಮ್ಸ್) : ಕಳೆದ ವರ್ಷದಿಂದ ಹದಗೆಟ್ಟ ಸ್ಥಿತಿಯಲ್ಲಿದ್ದು, ವಾಹನ ಸಂಚಾರಕ್ಕೆ ಅನಾನುಕೂಲವಾಗಿರುವ ಬಂಟ್ವಾಳ ಕಸ್ಬಾ ಗ್ರಾಮದ ಜಿಪಿಟಿ-ಕೆಳಗಿನ ಮಂಡಾಡಿ ರಸ್ತೆಯ ಕಾಮಗಾರಿಗೆ ಪುರಸಭಾ ಸದಸ್ಯ ಪುರೊಷೋತ್ತಮ್ ಅವರ 5 ಲಕ್ಷ ರೂಪಾಯಿ ಅನುದಾನದಲ್ಲಿ ರಸ್ತೆ ಕಾಂಕ್ರಿಟೀಕರಣಕ್ಕೆ ಮಾಜಿ ಸಚಿವ ಬಿ ರಮಾನಾಥ ರೈ ಅವರು ಶನಿವಾರ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೋ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ (ಬುಡಾ) ಅಧ್ಯಕ್ಷ ಬೇಬಿ ಕುಂದರ್, ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಪುರಸಭಾ ಸದಸ್ಯ ಜನಾರ್ದನ ಚಂಡ್ತಿಮಾರ್, ಪ್ರಮುಖರಾದ ವೆಂಕಪ್ಪ ಪೂಜಾರಿ, ನಾಗರಾಜ್, ಹರೀಶ್ ಕುಲಾಲ್, ಲೋಕೇಶ್ ಬಿ, ದಿವಾಕರ ಕುಲಾಲ್, ಕೃಷ್ಣಪ್ಪ ಕುಲಾಲ್, ಲಿಂಗಪ್ಪ ಕುಲಾಲ್, ಸತೀಶ್, ದೇವದಾಸ್ ಕುಲಾಲ್, ರೀತೇಶ್, ಸುರೇಂದ್ರ, ದೀಪಕ್, ಶ್ರೀಮತಿ ದೇವಕಿ, ಶ್ರೀಮತಿ ಶಾರದಾ, ಶ್ರೀಮತಿ ಗುಲಾಬಿ, ಚಂದ್ರಾವತಿ, ಕುಸುಮ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment