ಬೆಂಗಳೂರು, ಜನವರಿ 18, 2025 (ಕರಾವಳಿ ಟೈಮ್ಸ್) : ಅಲ್ಪಸಂಖ್ಯಾತ ವರ್ಗದ ಸಿಇಟಿ ಮೂಲಕ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಅರಿವು ಶೈಕ್ಷಣಿಕ ಸಾಲದ ನವೀಕರಣಕ್ಕಾಗಿ ಆನ್ ಲೈನ್ ಅರ್ಜಿ ಸಲ್ಲಿಕೆಗೆ ಮತ್ತೆ ಅವಕಾಶ ಕಲ್ಪಿಸಲಾಗಿದ್ದು, ಆನ್ ಲೈನ್ ಅರ್ಜಿ ಸಲ್ಲಿಕೆಗೆ ಜನವರಿ 31 ಕೊನೆ ದಿನಾಂಕವಾಗಿದೆ. ಸಿಇಟಿ/ ನೀಟ್ ಮೂಲಕ ಆಯ್ಕೆಯಾಗಿ ಕಳೆದ ಬಾರಿ ಅರ್ಜಿ ಸಲ್ಲಿಸದೆ ಇರುವ ಅಭ್ಯರ್ಥಿಗಳೂ ಕೂಡಾ ಈ ಬಾರಿ ಅರ್ಜಿ ಸಲ್ಲಿಸಲು ಅವಕಾಶ ಇದೆ.
2024-25ನೇ ಸಾಲಿನ ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಡಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿಇಟಿ-ನೀಟ್) ಮುಖಾಂತರ ಎಂ.ಬಿ.ಬಿ.ಎಸ್ ಬಿ.ಡಿ.ಎಸ್/ಬಿ ಆಯುಷ್ ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್/ಬ್ಯಾಚುಲರ್ ಆಫ್ ಇಂಜಿನಿಯರಿಂಗ್, ಬ್ಯಾಚುಲರ್/ ಪಾರ್ಮಸಿ/ ಕೃಷಿ ವಿಜ್ಞಾನ/ ಪಾರ್ಮಸ್ಯುಟಿಕಲ್ ಕೋರ್ಸ್‍ಗಳಿಗೆ ಆಯ್ಕೆ ಬಯಿಸಿರುವ ವಿದ್ಯಾರ್ಥಿಗಳಿಗೆ 50 ಸಾವಿರದಿಂದ 5 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಈ ಅರಿವು ಯೋಜನೆಯಡಿ ನೀಡಲಾಗುತ್ತದೆ.
0 comments:
Post a Comment