ಬಿ.ಸಿ.ರೋಡಿನಲ್ಲಿ ಆಲಿಯಾ ಐಸ್ ಕ್ರೀಂ ಪಾರ್ಲರ್ ಉದ್ಘಾಟನೆ
ಬಂಟ್ವಾಳ, ಜನವರಿ 27, 2024 (ಕರಾವಳಿ ಟೈಮ್ಸ್) : ತಾಲೂಕಿನ ಯಶಸ್ವಿ ಹೋಟೆಲ್ ಉದ್ಯಮಿ ಹಂಝ ಬಸ್ತಿಕೋಡಿ ಮಾಲಕತ್ವದ ಆನಿಯಾ ದರ್ಬಾರ್ ಗ್ರೂಪ್ ಆಫ್ ಹೊಟೇಲ್ಸ್ ಇದರ ಮತ್ತೊಂದು ಸಹ ಸಂಸ್ಥೆ ಆಲಿಯಾ ಐಸ್ ಕ್ರೀಂ ಪಾರ್ಲರ್ ಬಿ ಸಿ ರೋಡಿನ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ಭಾನುವಾರ (ಜನವರಿ 26) ಸಂಜೆ ಲೋಕಾರ್ಪಣೆಗೊಂಡಿದೆ.
ಸಯ್ಯಿದ್ ಕೆ ಪಿ ಎಸ್ ಝೈನುಲ್ ಆಬಿದೀನ್ ಜಮಾಲುಲ್ಲೈಲಿ ತಂಙಳ್ ಕಾಜೂರು ಅವರು ನೂತನ ಸಂಸ್ಥೆಯನ್ನು ಉದ್ಘಾಟಿಸಿ, ದುವಾ ನೇರವೇರಿಸಿದರು. ಸಯ್ಯಿದ್ ಮಾಡ ತಂಙಳ್, ಇರ್ಷಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು, ಮಾಜಿ ಶಾಸಕ ಬಿ ಎ ಮೊಯಿದಿನ್ ಬಾವಾ, ಕೇರಳ ಶಾಸಕ ಸಿಂಧು ಪಿ ವಿ ಅನ್ವರ್, ಶಿಗ್ಗಾವಿ ಮಾಜಿ ಸಂಸದ ಮಂಜುನಾಥ ಹೊನ್ನೂರು, ನೋಟರಿ-ನ್ಯಾಯವಾದಿ ಎಂ ಅಶ್ವನಿ ಕುಮಾರ್ ರೈ, ಉದ್ಯಮಿ ಕೆ ಸಂಜೀವ ಪೂಜಾರಿ ಬಿರ್ವ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಂ ತುಂಗಪ್ಪ ಬಂಗೇರ, ಹಿದಾಯ ಫೌಂಡೇಶನ್ ಅಧ್ಯಕ್ಷ ಹಾಜಿ ಜಿ ಮುಹಮ್ಮದ್ ಹನೀಫ್ ಗೋಳ್ತಮಜಲು, ನ್ಯಾಯವಾದಿ ಮುಹಮ್ಮದ್ ಕಬೀರ್ ಕೆಮ್ಮಾರ, ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಪ್ರಮುಖರಾದ ಬಶೀರ್ ಟಿ ಕೆ ಫರಂಗಿಪೇಟೆ, ಇಕ್ಬಾಲ್ ಪರಂಗಿಪೇಟೆ, ದಿನೇಶ್ ದಂಬೇದಾರ್, ಹಾಜಿ ಅಬ್ದುಲ್ ರಹಿಮಾನ್ ಬಸ್ತಿಕೋಡಿ, ಹಾಜಿ ಮುಸ್ತಫಾ, ಡಾ ಮುಸ್ತಫಾ ಬಸ್ತಿಕೋಡಿ ಮೊದಲಾದವರು ಭಾಗವಹಿಸಿದ್ದರು.
ಲೋಕಾರ್ಪಣಾ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಿದ ಸಂಸ್ಥೆಯ ಮಾಲಕ ಹಂಝ ಬಸ್ತಿಕೋಡಿ ಅವರು ಆಲಿಯಾ ಐಸ್ ಕ್ರೀಂ ಪಾರ್ಲರಿನಲ್ಲಿ ಎಲ್ಲಾ ರೀತಿಯ ಐಸ್ ಕ್ರೀಂ, ದೋಸಾ, ಚಾಟ್ಸ್, ಸ್ನಾಕ್ಸ್, ಫ್ರೂಟ್ ಜ್ಯೂಸ್, ಮಿಲ್ಕ್ ಶೇಖ್, ಫಲೂದಾ ಮೊದಲಾದ ಸವಿ ಸವಿ ಆಹಾರ ವಸ್ತುಗಳು ಮಿತ ದರದಲ್ಲಿ ಲಭ್ಯವಿದೆ ಎಂದರು.
0 comments:
Post a Comment