ಮಂಗಳೂರು, ಜನವರಿ 22, 2025 (ಕರಾವಳಿ ಟೈಮ್ಸ್) : ಸೆನ್ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 16/2024 ಕಲಂ 66(ಡಿ) ಕಾಯ್ದೆ 417,420 ಐಪಿಸಿ ಪ್ರಕರಣದ ಆರೋಪಿ ಮಹಾರಾಷ್ಟ್ರ ನಿವಾಸಿಯನ್ನು ಮುಂಬೈಯಲ್ಲಿ ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.
ಬಂಧಿತ ಆರೋಪಿಯನ್ನು ಮಹಾರಾಷ್ಟ್ರ ರಾಜ್ಯದ ನವಿ ಮುಂಬಯಿ ನಿವಾಸಿ ಅತುಲ್ ತ್ರಿಪಾಠಿ (29) ಎಂದು ಹೆಸರಿಸಲಾಗಿದೆ.
ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಡಿವೈಎಸ್ಪಿ ಮಂಜುನಾಥ ಆರ್ ಜಿ, ಅವರ ನೇತೃತ್ವದಲ್ಲಿ ಪಿಎಸ್ಸೈ ಮಜುನಾಥ ಟಿ, ಎಚ್ ಸಿ ಗಳಾದ ಪುನೀತ್ ಕುಮಾರ್, ಅಜಿತ್ ಬಂಗೇರ ಹಾಗೂ ಪಿ ಸಿ ದರ್ಶನ್ ಬಿ ಎನ್ ಅವರುಗಳ ತಂಡ ಕಾರ್ಯಾಚರಣೆ ನಡೆಸಿ ಆರೋಪಿ ನವಿಮುಂಬಯಿ ನಿವಾಸಿ ಅತುಲ್ ತ್ರಿಪಾಠಿ (29) ಎಂಬಾತನನ್ನು ಸೋಮವಾರ (ಜನವರಿ 20) ರಂದು ಮುಂಬೈಯಲ್ಲಿ ದಸ್ತಗಿರಿ ಮಾಡಿ ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
0 comments:
Post a Comment