ಪ್ರತಿಪಕ್ಷಗಳ ಟೀಕೆಗೆ ಉತ್ತರಿಸದೆ ಮಾತಿಗಿಂತ ಕೃತಿಗೆ ಹೆಚ್ಚು ಮಹತ್ವ ಕೊಟ್ಟವರು ಡಾ ಸಿಂಗ್ : ಜಿಲ್ಲಾ ಕಾಂಗ್ರೆಸ್ ನುಡಿನಮನ ಕಾರ್ಯಕ್ರಮದಲ್ಲಿ ರಮಾನಾಥ ರೈ ಸ್ಮರಣೆ - Karavali Times ಪ್ರತಿಪಕ್ಷಗಳ ಟೀಕೆಗೆ ಉತ್ತರಿಸದೆ ಮಾತಿಗಿಂತ ಕೃತಿಗೆ ಹೆಚ್ಚು ಮಹತ್ವ ಕೊಟ್ಟವರು ಡಾ ಸಿಂಗ್ : ಜಿಲ್ಲಾ ಕಾಂಗ್ರೆಸ್ ನುಡಿನಮನ ಕಾರ್ಯಕ್ರಮದಲ್ಲಿ ರಮಾನಾಥ ರೈ ಸ್ಮರಣೆ - Karavali Times

728x90

28 December 2024

ಪ್ರತಿಪಕ್ಷಗಳ ಟೀಕೆಗೆ ಉತ್ತರಿಸದೆ ಮಾತಿಗಿಂತ ಕೃತಿಗೆ ಹೆಚ್ಚು ಮಹತ್ವ ಕೊಟ್ಟವರು ಡಾ ಸಿಂಗ್ : ಜಿಲ್ಲಾ ಕಾಂಗ್ರೆಸ್ ನುಡಿನಮನ ಕಾರ್ಯಕ್ರಮದಲ್ಲಿ ರಮಾನಾಥ ರೈ ಸ್ಮರಣೆ

ಮಂಗಳೂರು, ಡಿಸೆಂಬರ್ 28, 2024 (ಕರಾವಳಿ ಟೈಮ್ಸ್) : ಇಂದು ವಿಶ್ವದ ಬಲಿಷ್ಠ ಅರ್ಥ ವ್ಯವಸ್ಥೆಗಳಲ್ಲಿ ಭಾರತ ಗುರುತಿಸಲು ಡಾ ಮನಮೋಹನ್ ಸಿಂಗ್ ಅವರು ಕಾರಣ. ಅವರ ದೂರದೃಷ್ಟಿಯ ಯೋಜನೆಗಳು, ಸಮರ್ಥ ನಾಯಕತ್ವ ವಿಶ್ವಕ್ಕೆ ಮಾದರಿ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದ್ದಾರೆ. 

ಅಗಲಿದ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರಿಗೆ ಶನಿವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಡಾ ಮನಮೋಹನ್ ಸಿಂಗ್ ಅವರು ಮಾತಿಗಿಂತ ಕೃತಿಗೆ ಹೆಚ್ಚು ಮಹತ್ವ ಕೊಟ್ಟವರು. ಪ್ರತಿಪಕ್ಷದ ಟೀಕೆಗಳಿಗೆ ಉತ್ತರಿಸದೇ ಜನಪರ ಕಾರ್ಯಕ್ರಮಗಳಿಗೆ ಒತ್ತು ನೀಡಿದ್ದರು. ಅವರು ಮಾಹಿತಿ ಹಕ್ಕು ಕಾಯ್ದೆ, ಆಹಾರ ಭದ್ರತಾ ಕಾಯ್ದೆ, ನರ್ಮ್ ಯೋಜನೆ, ಶಿಕ್ಷಣ ಹಕ್ಕು ಕಾಯ್ದೆ, ವಿಷೇಷ ಆರ್ಥಿಕ ವಲಯ ಕಾಯ್ದೆ, ನರೇಗಾ ಯೋಜನೆ, ಎಫ್‍ಡಿಐ, ಬ್ಯಾಂಕ್ ಬಡ್ಡಿ ಇಳಿಕೆ, ವಿದೇಶಿ ನೇರ ಬಂಡವಾಳ ನೀತಿ ಸೇರಿದಂತೆ ಹಲವು ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಿ ದೇಶದ ಬಡವರು, ಮಧ್ಯಮ ವರ್ಗದವರನ್ನು ಆರ್ಥಿಕವಾಗಿ ಮೇಲೆತ್ತುವಲ್ಲಿ ಯಶಸ್ವಿಯಾದರು. ಅವರ ಕಾಲಾವಧಿಯಲ್ಲಿ ದೇಶದ ಬ್ಯಾಂಕುಗಳು ದಿವಾಳಿಯಾಗದೇ ಇರಲು ಅವರ ದೂರದೃಷ್ಟಿಯೇ ಕಾರಣ ಎಂದು ಸ್ಮರಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಹರೀಶ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಜೆ ಆರ್ ಲೋಬೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ಪೂಜಾರಿ, ಮುಡಾ ಅಧ್ಯಕ್ಷ ಸದಾಶಿವ್ ಉಳ್ಳಾಲ್, ಗುರುನಾಮ್ ಸಿಂಗ್ ವಿಕ್ಕಿ ನುಡಿನಮನ ಸಲ್ಲಿಸಿದರು. 

ಬ್ಲಾಕ್ ಅಧ್ಯಕ್ಷರಾದ ಜೆ ಅಬ್ದುಲ್ ಸಲೀಂ, ಮೋಹನ್ ಕೋಟ್ಯಾನ್, ಸುರೇಂದ್ರ ಕಂಬಳಿ, ಬಾಲಕೃಷ್ಣ ಅಂಚನ್, ಚಂದ್ರಶೇಖರ್ ಭಂಡಾರಿ, ಪ್ರಮುಖರಾದ ಬಿ ಎಂ ಅಬ್ಬಾಸ್ ಅಲಿ, ಅಬ್ದುಲ್ ರವೂಫ್, ಟಿ ಹೊನ್ನಯ್ಯ, ಸದಾಶಿವ್ ಶೆಟ್ಟಿ, ಅಬೂಬಕ್ಕರ್ ಕುದ್ರೋಳಿ, ಅಶ್ರಫ್ ಬಜಾಲ್, ಬೇಬಿ ಕುಂದರ್, ನವೀನ್ ಡಿಸೋಜ, ಚೇತನ್ ಬೆಂಗ್ರೆ, ವಿಶ್ವಾಸ್ ಕುಮಾರ್ ದಾಸ್, ಜಯಶೀಲ ಅಡ್ಯಂತಾಯ, ನೀರಜ್ ಚಂದ್ರಪಾಲ್, ಶುಭೋದಯ ಆಳ್ವ, ದಿನೇಶ್ ಮುಳೂರು, ಟಿ ಸುಧೀರ್, ಜಿತೇಂದ್ರ ಸುವರ್ಣ, ಗಿರೀಶ್ ಶೆಟ್ಟಿ, ಶಬೀರ್ ಸಿದ್ದಕಟ್ಟೆ, ಹಯಾತುಲ್ ಖಾಮಿಲ್, ಯೋಗಿಶ್ ಕುಮಾರ್, ರಹಿಮಾನ್ ಕೋಡಿಜಾಲ್, ಖಾದರ್ ಏರ್ ಪೆÇೀರ್ಟ್, ಸತೀಶ್ ಪೆಂಗಲ್, ಹೇಮಂತ್ ಗರೋಡಿ, ಸುಹಾನ್ ಆಳ್ವ, ಲಕ್ಷ್ಮೀ ನಾಯರ್, ತನ್ವೀರ್ ಶಾ, ಸಾರಿಕಾ ಪೂಜಾರಿ, ಚಂದ್ರಕಲಾ ಜೋಗಿ, ಶಾಂತಲಾ ಗಟ್ಟಿ, ಮಂಜುಳಾ ನಾಯಕ್, ಗಣೇಶ್ ಪೂಜಾರಿ, ಚಂದ್ರಹಾಸ ಪೂಜಾರಿ, ನೆಲ್ಸನ್ ಮೊಂತೇರೊ, ಪ್ರೇಮ್ ಬಳ್ಳಾಲ್ ಭಾಗ್, ಹೈದರ್ ಬೋಳಾರ್, ಅಭಿನಂದನ್ ಹರೀಶ್, ರಮಾನಂದ ಪೂಜಾರಿ, ಮಂಗಳೂರು ಗುರುದ್ವಾರ ಧರ್ಮದರ್ಶಿ ಬಾಬಾ ಕರಂ ಸಿಂಗ್, ಗುರುದ್ವಾರದ ಮುಖಂಡರಾದ ಜಿತೇಂದ್ರ ಸಿಂಗ್ ಸಂಜು, ಗುರ್ಮೀತ್ ಸಿಂಗ್ ಮೋಂಟಿ, ಸುರ್ವೀರ್ ಸಿಂಗ್, ಚಿಂಟು ಸಿಂಗ್, ಮಂಜೀತ್ ಸಿಂಗ್, ಇಸ್ಮೀತ್ ಸಿಂಗ್ ಖಾಲ್ಸಾ ಮೊದಲಾದವರು ಭಾಗವಹಿಸಿದ್ದರು. ಕೆ ಕೆ ಶಾಹುಲ್ ಹಮೀದ್ ಮನಮೋಹನ್ ಸಿಂಗ್ ಕುರಿತ ಕವನ ವಾಚಿಸಿದರು. ಮಾಜಿ ಮೇಯರ್ ಶಶಿಧರ್ ಹೆಗ್ಡೆ ವಂದಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಪ್ರತಿಪಕ್ಷಗಳ ಟೀಕೆಗೆ ಉತ್ತರಿಸದೆ ಮಾತಿಗಿಂತ ಕೃತಿಗೆ ಹೆಚ್ಚು ಮಹತ್ವ ಕೊಟ್ಟವರು ಡಾ ಸಿಂಗ್ : ಜಿಲ್ಲಾ ಕಾಂಗ್ರೆಸ್ ನುಡಿನಮನ ಕಾರ್ಯಕ್ರಮದಲ್ಲಿ ರಮಾನಾಥ ರೈ ಸ್ಮರಣೆ Rating: 5 Reviewed By: karavali Times
Scroll to Top