ಪುತ್ತೂರು, ಡಿಸೆಂಬರ್ 21, 2024 (ಕರಾವಳಿ ಟೈಮ್ಸ್) : ಮನೆಯಿಂದ ಔಷಧಿಗೆಂದು ಪೇಟೆಗೆ ತೆರಳಿದ ಮಹಿಳೆ ತಿರುಗಿ ಬರುವಷ್ಟರಲ್ಲಿ ಮನೆಗೆ ನುಗ್ಗಿದ ಕಳ್ಳರು ನಗದು ಹಾಗೂ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವುಗೈದು ಪರಾರಿಯಾದ ಘಟನೆ ಸರ್ವೆ ಗ್ರಾಮದ ಭಕ್ತಕೋಡಿ ಕಲ್ಲಮೆ ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.
ಇಲ್ಲಿನ ನಿವಾಸಿ ಕಿಶೋರ್ (35) ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ಸಂಭವಿಸಿದ್ದು, ಇವರು ಶುಕ್ರವಾರ ಬೆಳಿಗ್ಗೆ ಕೂಲಿ ಕೆಲಸಕ್ಕೆಂದು ಹೋಗಿದ್ದು, ಇವರ ಪತ್ನಿ ಬೆಳಿಗ್ಗೆ ಔಷಧಿ ತರಲು ಪುತ್ತೂರಿಗೆ ಹೋಗಿದ್ದವರು, ಮಧ್ಯಾಹ್ನ ವೇಳೆ ಮರಳಿ ಬಂದಾಗ ಮನೆಯ ಎರಡು ರೂಂಗಳಲ್ಲಿದ್ದ ಎರಡುಕಬ್ಬಿಣದ ಕಪಾಟುಗಳು ತೆರದ ಸ್ಥಿತಿಯಲ್ಲಿದ್ದು, ಅದರಲ್ಲಿದ್ದ ಬಟ್ಟೆ-ಬರೆಗಳು ಚೆಲ್ಲಾಪಿಲ್ಲಿಯಾಗಿರುವುದು ಕಂಡುಬಂದಿದೆ. ಮನೆಯ ಹಿಂದಿನ ಬಾಗಿಲು ಮುರಿದು ತೆರೆದಿತ್ತು. ಈ ಮನೆಯೊಳಗೆ ಪರಿಶೀಲಿಸಿದಾಗ ಕಪಾಟಿನಲ್ಲಿದ್ದ ಸುಮಾರು 1.80 ಲಕ್ಷ ರೂಪಾಯಿ ಮೌಲ್ಯದ 88 ಗ್ರಾಂ ಚಿನ್ನಾಭರಣಗಳು ಹಾಗೂ 20 ಸಾವಿರ ರೂಪಾಯಿ ನಗದು ಹಣ ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment