ಬೆಳ್ತಂಗಡಿ, ಡಿಸೆಂಬರ್ 19, 2024 (ಕರಾವಳಿ ಟೈಮ್ಸ್) : ಮನೆಯಲ್ಲಿ ಕ್ರಿಸ್ಮಸ್ ಹಬ್ಬದ ಸಿದ್ದತೆಯಲ್ಲಿದ್ದ ಬಾಲಕನಿಗೆ ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ ತೆಂಕಕಾರಂದೂರು ಗ್ರಾಮದ ಪೆರಾಡಿತ್ತಾಯ ಕಟ್ಟೆ ಎಂಬಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಮೃತ ಬಾಲಕನನ್ನು ಇಲ್ಲಿನ ನಿವಾಸಿ ಸ್ಟೀಫನ್ ಸ್ಟಾನ್ಲಿ ಡಿಸೋಜ (14) ಎಂದು ಹೆಸರಿಸಲಾಗಿದೆ. ಈ ಬಗ್ಗೆ ಮನೆ ಮಾಲಕ ಮ್ಯಾಕ್ಸಿಮ್ ಡಿ ಸೋಜಾ ಅವರು ವೇಣೂರು ಪೊಲೀಸರಿಗೆ ದೂರು ನೀಡಿದ್ದು, ಇವರ ಸಹೋದರನ ಮಗ ಸ್ಟೀಫನ್ ಸ್ಟಾನ್ಲಿ ಡಿಸೋಜಾ ಗುರುವಾರ ಬೆಳಿಗ್ಗೆ ತನ್ನ ವಾಸ್ತವ್ಯದ ಮನೆಯಾದ ಬೆಳ್ತಂಗಡಿ ತಾಲೂಕು ತೆಂಕಕಾರಂದೂರು ಗ್ರಾಮದ ಪೆರಾಡಿತ್ತಾಯ ಕಟ್ಟೆ ಎಂಬಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಅಂಗಳದಲ್ಲಿ ಅಲಂಕಾರ ಮಾಡುವ ವೇಳೆ ಮನೆಯ ಒಳಗೆ ಇರುವ ವಿದ್ಯುತ್ ಪ್ಲಗ್ ನಲ್ಲಿ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ವಿದ್ಯುತ್ ಅಪಘಾತದಿಂದ ಮೃತಪಟ್ಟಿರುತ್ತಾನೆ ಎಂದು ನೀಡಿದ ದೂರಿನ ಮೇರೆಗೆ ವೇಣೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment