ಬಂಟ್ವಾಳ, ಡಿಸೆಂಬರ್ 11, 2024 (ಕರಾವಳಿ ಟೈಮ್ಸ್) : ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 62/2009 ಕಲಂ 498(ಎ), 504, 323, 324, ಆರ್/ಡಬ್ಲ್ಯು 34 ಐಪಿಸಿ 4,5 ಡಿಪಿ ಆಕ್ಟ್ ಪ್ರಕಾರ 15 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ, ಮಂಗಳೂರು ತಾಲೂಕು, ಕಣ್ಣೂರು ಗ್ರಾಮದ ಗಾಣದಬೆಟ್ಟು ನಿವಾಸಿ ಅಜರುದ್ದೀನ್ ಎಂಬಾತನನ್ನು ಸೋಮವಾರ ಬಂಟ್ವಾಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಟ್ವಾಳ ಡಿವೈಎಸ್ಪಿ ವಿಜಯಪ್ರಸಾದ್ ಅವರ ಮಾರ್ಗದರ್ಶನಲ್ಲಿ, ಪೆÇಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ಹಾಗೂ ಪಿಎಸ್ಸೈಗಳಾದ ಹರೀಶ್ ಎಂ ಆರ್, ಮೂರ್ತಿ, ಲೋಲಾಕ್ಷ ಅವರುಗಳ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಹರಿಶ್ಚಂದ್ರ, ಗಣೇಶ್ ಪ್ರಸಾದ್, ರಾಜೇಶ್ ಅವರುಗಳ ತಂಡ ಆರೋಪಿಯನ್ನು ಪುತ್ತೂರು ತಾಲೂಕು ಕೆಯ್ಯೂರು ಎಂಬಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
0 comments:
Post a Comment