ಬಂಟ್ವಾಳ, ಡಿಸೆಂಬರ್ 13, 2024 (ಕರಾವಳಿ ಟೈಮ್ಸ್) : ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾಲಾಡಿ ಗ್ರಾಮದ ಅರ್ತಿಲ ಎಂಬಲ್ಲಿ ಡಿಸೆಂಬರ್ 2 ರಂದು ಕಳವಾದ ಬೊಲೆರೋ ಪಿಕಪ್ ಗೂಡ್ಸ್ ವಾಹನವನ್ನು ಪತ್ತೆ ಹಚ್ಚಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಾಗಲಕೋಟೆಯಿಂದ ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಬಾಗಲಕೋಟೆ ಜಿಲ್ಲೆ, ಮುದೋಳು ತಾಲೂಕು, ಬಂಡನೂರು ನಿವಾಸಿ ಕನಕಪ್ಪ ಯಮನಪ್ಪ ಕ್ಯಾದಿಗೇರಿ (24) ಹಾಗೂ ಹುನಗಂದ ತಾಲೂಕು, ಚಿಕ್ಕಮಾಗಿ ಗ್ರಾಮದ ಮಡ್ಡಿಲಕ್ಕಮ್ಮ ದೇವಸ್ಥಾನ ಬಳಿಯ ಹೊಸ ಫ್ಲ್ಯಾಟ್ ನಿವಾಸಿ ರಮೇಶ್ ಚೌಹಾನ್ (26) ಎಂದು ಹೆಸರಿಸಲಾಗಿದೆ.
ಮಾಲಾಡಿ ಗ್ರಾಮದ ಅರ್ತಿಲ ಎಂಬಲ್ಲಿನ ಟಿಯಾರಾ ಇಂಟರ್ ಲಾಕ್ ಫ್ಯಾಕ್ಟರಿಯ ಆವರಣದಲ್ಲಿ ನಿಲ್ಲಿಸಲಾಗಿದ್ದ ಫ್ಯಾಕ್ಟರಿ ಮಾಲಕ ಟೆರೆನ್ಸ್ ಜೋಶೆಲ್ ವೇಗಸ್ ಎಂಬವರಿಗೆ ಸೇರಿದ ಕೆಎ19 ಡಿ 5858 ನೋಂದಣಿ ಸಂಖ್ಯೆಯ ಬೊಲೊರೋ ಪಿಕಪ್ ಗೂಡ್ಸ್ ವಾಹನವನ್ನು ಡಿಸೆಂಬರ್ 2 ರಂದು ಕಳವುಗೈಯಲಾಗಿತ್ತು. ಈ ಬಗ್ಗೆ ಡಿ 3 ರಂದು ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳ ಸಹಿತ ವಾಹನವನ್ನು ಪತ್ತೆ ಹಚ್ಚಿದ್ದಾರೆ. ಪ್ರಕರಣ ಬೇಧಿಸುವಲ್ಲಿ ಜಿಲ್ಲಾ ಎಸ್ಪಿ ಯತೀಶ್ ಎನ್, ಅಡಿಶನಲ್ ಎಸ್ಪಿ ರಾಜೇಂದ್ರ ಡಿ ಎಸ್ ಅವರ ನಿರ್ದೇಶನದಂತೆ, ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ, ಬೆಳ್ತಂಗಡಿ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ನಾಗೇಶ್ ಕದ್ರಿ ಅವರ ನೇತೃತ್ವದಲ್ಲಿ, ಪೂಂಜಾಲಕಟ್ಟೆ ಪೆÇಲೀಸ್ ಠಾಣಾ ಪಿಎಸ್ಸೈಗಳಾದ ನಂದ ಕುಮಾರ್ ಹಾಗೂ ಓಮನ ಎನ್ ಕೆ ಅವರುಗಳು ಸಿಬ್ಬಂದಿಗಳಾದ ಸಂದೀಪ್ ಎಸ್, ರಾಹುಲ್ ರಾವ್, ರಜಿತ್, ಸಲೀಂ ಪಟೇಲ್, ಪ್ರಕಾಶ್, ರಮ್ಯ, ವೇಣೂರು ಠಾಣಾ ಸಿಬ್ಬಂದಿ ಬಸವರಾಜ್ ಹಾಗೂ ಗಣಕ ಯಂತ್ರ ವಿಭಾಗದ ಸಿಬ್ಬಂದಿಗಳಾದ ಸಂಪತ್ ಮತ್ತು ದಿವಾಕರ ಅವರುಗಳು ಕಾರ್ಯನಿರ್ವಹಿಸಿದ್ದಾರೆ.
0 comments:
Post a Comment