ಪುತ್ತೂರು ಪೊಲೀಸರ ಕಾರ್ಯಾಚರಣೆ : 2 ಪ್ರತ್ಯೇಕ ಪ್ರಕರಣ ಬೇಧಿಸಿ ಮೂವರು ಕಳ್ಳಿಯರ ಹೆಡೆಮುರಿ ಕಟ್ಟಿದ ಖಾಕಿ ಪಡೆ - Karavali Times ಪುತ್ತೂರು ಪೊಲೀಸರ ಕಾರ್ಯಾಚರಣೆ : 2 ಪ್ರತ್ಯೇಕ ಪ್ರಕರಣ ಬೇಧಿಸಿ ಮೂವರು ಕಳ್ಳಿಯರ ಹೆಡೆಮುರಿ ಕಟ್ಟಿದ ಖಾಕಿ ಪಡೆ - Karavali Times

728x90

21 December 2024

ಪುತ್ತೂರು ಪೊಲೀಸರ ಕಾರ್ಯಾಚರಣೆ : 2 ಪ್ರತ್ಯೇಕ ಪ್ರಕರಣ ಬೇಧಿಸಿ ಮೂವರು ಕಳ್ಳಿಯರ ಹೆಡೆಮುರಿ ಕಟ್ಟಿದ ಖಾಕಿ ಪಡೆ

ಪುತ್ತೂರು, ಡಿಸೆಂಬರ್ 21, 2024 (ಕರಾವಳಿ ಟೈಮ್ಸ್) : ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಕಳವು ಪ್ರಕರಣ ಬೇಧಿಸಿದ ಪೊಲೀಸರು ಮೂರು ಮಂದಿ ಕಳ್ಳಿಯರನ್ನು ಬಂಧಿಸಿದ್ದಾರೆ. 

ಡಿಸೆಂಬರ್ 19 ರಂದು ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಗೋಳ್ತಮಜಲು ಗ್ರಾಮದ ನಿವಾಸಿ ಶ್ರೀಮತಿ ಸರಸ್ವತಿ ಎಂಬವರ ಬ್ಯಾಗಿನಿಂದ ಚಿನ್ನಾಭರಣಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿತೆ ಬೆಂಗಳೂರು-ರಾಜಾಜಿನಗರ ನಿವಾಸಿ ಜ್ಯೋತಿ ಹಾಗೂ ಶ್ರೀಮತಿ ಯಶೋದ ಎಂಬವರುಗಳನ್ನು ದಸ್ತಗಿರಿ ಮಾಡಲಾಗಿದೆ. ಕಳವಾದ 25 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಇನ್ನೊಂದು ಪ್ರಕರಣದಲ್ಲಿ ಡಿಸೆಂಬರ್ 13 ರಂದು ಪುತ್ತೂರು ಪೇಟೆಯ ಕೋರ್ಟ್ ರಸ್ತೆಯಲ್ಲಿರುವ ಶಿವಪ್ರಸಾದ್ ಜ್ಯುವೆಲ್ಲರಿ ಅಂಗಡಿಯಿಂದ ಚಿನ್ನ ಖರೀದಿ ಮಾಡುವ ನೆಪದಲ್ಲಿ ಬಂದು 77 ಸಾವಿರ ರೂಪಾಯಿ ಮೌಲ್ಯದ 9 ಗ್ರಾಂ ತೂಕದ 3 ಚಿನ್ನದ ಉಂಗುರಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮಂಗಳೂರು-ನೀರುಮಾರ್ಗ ನಿವಾಸಿ ವಿದ್ಯಾ ಎಂಬಾಕೆಯನ್ನು ದಸ್ತಗಿರಿ ಮಾಡಿದ್ದಾರೆ. ಕಳವಾದ 77 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಡಿಸಿಕೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು ಪೊಲೀಸರ ಕಾರ್ಯಾಚರಣೆ : 2 ಪ್ರತ್ಯೇಕ ಪ್ರಕರಣ ಬೇಧಿಸಿ ಮೂವರು ಕಳ್ಳಿಯರ ಹೆಡೆಮುರಿ ಕಟ್ಟಿದ ಖಾಕಿ ಪಡೆ Rating: 5 Reviewed By: karavali Times
Scroll to Top