ಸಜಿಪಮೂಡ ಸರಕಾರಿ ಪದವಿಪೂರ್ವ ಕಾಲೇಜಿಗೆ ದಾನಿಗಳಿಂದ ಪ್ರಯೋಗಾಲಯ ಕೊಡುಗೆ - Karavali Times ಸಜಿಪಮೂಡ ಸರಕಾರಿ ಪದವಿಪೂರ್ವ ಕಾಲೇಜಿಗೆ ದಾನಿಗಳಿಂದ ಪ್ರಯೋಗಾಲಯ ಕೊಡುಗೆ - Karavali Times

728x90

12 December 2024

ಸಜಿಪಮೂಡ ಸರಕಾರಿ ಪದವಿಪೂರ್ವ ಕಾಲೇಜಿಗೆ ದಾನಿಗಳಿಂದ ಪ್ರಯೋಗಾಲಯ ಕೊಡುಗೆ

ಬಂಟ್ವಾಳ, ಡಿಸೆಂಬರ್ 12, 2024 (ಕರಾವಳಿ ಟೈಮ್ಸ್) : ಸಜಿಪಮೂಡ ಸರಕಾರಿ ಪದವಿಪೂರ್ವ ಕಾಲೇಜಿಗೆ ದಾನಿಗಳ ಸಹಕಾರದಿಂದ ನಿರ್ಮಾಣಗೊಂಡ ನೂತನ ಪ್ರಯೋಗಾಲಯ ಉದ್ಘಾಟನೆಗೊಂಡಿತು. ಕಾಲೇಜು ಪ್ರಾಂಶುಪಾಲ ಸುರೇಶ್ ಐತಾಳ್ ಅವರ ವಿಶೇಷ ಪ್ರಯತ್ನದಿಂದ ದಾನಿಗಳು ಈ ಪ್ರಯೋಗಾಲಯವನ್ನು ಕಾಲೇಜಿಗೆ ಕೊಡುಗೆಯಾಗಿ ನೀಡಿ ಸಹಕರಿಸಿದ್ದಾರೆ. ಸುಮಾರು 2 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಪ್ರಯೋಗಾಲಯ ಇದೀಗ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಅರ್ಪಣೆಗೊಂಡಿದೆ. 

ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಪ್ರಯೋಗಾಲಯ ಉದ್ಘಾಟಿಸಿದರು. ಈ ಸಂದರ್ಭ ಎಂ ಸುಬ್ರಹ್ಮಣ್ಯ ಭಟ್, ಪ್ರಾಂಶುಪಾಲ ಸುರೇಶ್ ಐತಾಳ್, ಉಪನ್ಯಾಸಕರಾದ ಬಾಲಕೃಷ್ಣ ಎನ್ ವಿ, ಸುಂದರಿ, ಭಾರತಿ, ಶೋಭಾ, ಗಾಯತ್ರಿ, ಯಶೋಧಾ, ಸಿಂಧೂಜಾ, ಲತಾ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಸಜಿಪಮೂಡ ಸರಕಾರಿ ಪದವಿಪೂರ್ವ ಕಾಲೇಜಿಗೆ ದಾನಿಗಳಿಂದ ಪ್ರಯೋಗಾಲಯ ಕೊಡುಗೆ Rating: 5 Reviewed By: karavali Times
Scroll to Top