ಸುಪ್ತವಾಗಿರುವ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಹೊರಗೆಳೆಯುವುದು ಹಿರಿಯರ ಜವಾಬ್ದಾರಿ : ರಮೇಶ್ ಬಾಯಾರು - Karavali Times ಸುಪ್ತವಾಗಿರುವ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಹೊರಗೆಳೆಯುವುದು ಹಿರಿಯರ ಜವಾಬ್ದಾರಿ : ರಮೇಶ್ ಬಾಯಾರು - Karavali Times

728x90

15 December 2024

ಸುಪ್ತವಾಗಿರುವ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಹೊರಗೆಳೆಯುವುದು ಹಿರಿಯರ ಜವಾಬ್ದಾರಿ : ರಮೇಶ್ ಬಾಯಾರು

ಬಂಟ್ವಾಳ, ಡಿಸೆಂಬರ್ 15, 2024 (ಕರಾವಳಿ ಟೈಮ್ಸ್) : ಪ್ರತೀ ಮಗುವಿನ ಒಳಗೂ ಪ್ರತಿಭೆಗಳು ಸುಪ್ತವಾಗಿರುತ್ತವೆ. ಅವನ್ನು ಗುರುತಿಸಿ ಹೊರತರುವುದು ಹಿರಿಯರ ಜವಾಬ್ದಾರಿ ಎಂದು ಮಕ್ಕಳ ಕಲಾ ಲೋಕದ ಅಧ್ಯಕ್ಷರೂ, ಬಂಟ್ವಾಳ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಗೌರವ ಸಲಹೆಗಾರರೂ ಆಗಿರುವ ರಮೇಶ ಎಂ ಬಾಯಾರು ಹೇಳಿದರು. 

ಕಲ್ಲಡ್ಕದ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಘಟಕದ ವತಿಯಿಂದ ನಡೆದ ಸಾಹಿತ್ಯ ಸಂಭ್ರಮ-7 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ವಿದ್ಯಾರ್ಥಿ£ಲಯದ ಮೇಲ್ವಿಚಾರಕಿ ಅಂಬುಜಾಕ್ಷಿ ಕೆ ಕಾರ್ಯಕ್ರಮ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಸುರೇಖ ಯಳವಾರ ಮತ್ತು ಮಲ್ಲಿಕಾ ಜ್ಯೋತಿಗುಡ್ಡೆ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ನಡೆಸಿಕೊಟ್ಟರು. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಘಟಕಾಧ್ಯಕ್ಷೆ ಶ್ರೀಕಲಾ ಕಾರಂತ್ ಪ್ರಸ್ತಾವನೆಗೈದರು. ಜತೆ ಕಾರ್ಯದರ್ಶಿ ರಶ್ಮಿತಾ ಸುರೇಶ್ ಜೋಗಿಬೆಟ್ಟು ಸ್ವಾಗತಿಸಿ, ವಿದ್ಯಾರ್ಥಿ ನಾಯಕಿ ಲಕ್ಷ್ಮಿ ವಂದಿಸಿದರು. ಶಶಿಧರ ಏಮಾಜೆ ಕಾರ್ಯಕ್ರಮ ನಿರೂಪಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಸುಪ್ತವಾಗಿರುವ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಹೊರಗೆಳೆಯುವುದು ಹಿರಿಯರ ಜವಾಬ್ದಾರಿ : ರಮೇಶ್ ಬಾಯಾರು Rating: 5 Reviewed By: karavali Times
Scroll to Top