ಬಂಟ್ವಾಳ, ಡಿಸೆಂಬರ್ 03, 2024 (ಕರಾವಳಿ ಟೈಮ್ಸ್) : ಫೆಂಗಾಲೆ ಚಂಡಮಾರುತದ ಪರಿಣಾಮ ಬಂಟ್ವಾಳ ತಾಲೂಕಿನಾದ್ಯಂತ ಸೋಮವಾರದಿಂದ ಸುರಿದ ಮಳೆಗೆ ಎರಡು ಮನೆಗಳಿಗೆ ಹಾನಿ ಸಂಭವಿಸಿದೆ.
ಚೆನ್ನೈತ್ತೋಡಿ ಗ್ರಾಮದ ಉಳ್ಳಗುಡ್ಡೆ ನಿವಾಸಿ ಜಗದೀಶ್ ಬಿನ್ ವಿಠ್ಠಲ ಶೆಟ್ಟಿ ಅವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದೆ. ಅರಳ ಗ್ರಾಮದ ಕಂಡದೊಟ್ಟು ನಿವಾಸಿ ರಾಧಾ ಕೋಂ ಕೊರಗಪ್ಪ ಅವರ ವಾಸ್ತವ್ಯದ ಮನೆ ಭಾಗಶಃ ಹಾನಿಯಾಗಿದೆ.
0 comments:
Post a Comment