ಬಂಟ್ವಾಳ, ಡಿಸೆಂಬರ್ 07, 2024 (ಕರಾವಳಿ ಟೈಮ್ಸ್) : ಬಿ ಸಿ ರೋಡು ಸಮೀಪದ ಪರ್ಲಿಯಾ-ನಂದರಬೆಟ್ಟು ನಿವಾಸಿ, ಕಂಪೆನಿಯೊಂದರ ಸೇಲ್ಸ್ ಎಕ್ಸಿಕ್ಯುಟಿವ್ ಆಗಿದ್ದ ಅಬ್ದುಲ್ ಬಶೀರ್ (58) ಅವರು ಹೃದಯಾಘಾತದಿಂದ ಶನಿವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ವಾರದ ಹಿಂದೆ ಇವರಿಗೆ ಹಠಾತ್ ಹೃದಯಸ್ಥಂಭನವಾಗಿದ್ದು, ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಹೃದಯ ಚಿಕಿತ್ಸೆ ನಡೆಸಿ ಮನೆಗೆ ಬಂದಿದ್ದರು. ಶನಿವಾರ ಪೂರ್ವಾಹ್ನ ಮನೆಯಲ್ಲಿ ಸ್ನೇಹಿತರ ಜೊತೆ ಕುಳಿತು ಮಾತನಾಡುತ್ತಿದ್ದಂತೆ ಮತ್ತೆ ಇವರಿಗೆ ಹೃದಯಾಘಾತ ಉಂಟಾಗಿದ್ದು, ತಕ್ಷಣ ಕೆಎಂಸಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮಧ್ಯಾಹ್ನದ ವೇಳೆಗೆ ಅವರಿಗೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೂಲತಃ ವಿಟ್ಲ ಸಮೀಪದ ಬೊಬ್ಬೆಕೇರಿಯವರಾದ ಇವರು ಕಳೆದ ಹಲವು ವರ್ಷಗಳಿಂದ ಬಿ ಸಿ ರೋಡು ಸಮೀಪದ ಪರ್ಲಿಯಾ-ನಂದರಬೆಟ್ಟುವಿನಲ್ಲಿ ವಾಸ್ತವ್ಯ ಹೊಂದಿದ್ದು, ಖಾಸಗಿ ಸಂಸ್ಥೆಯೊಂದರಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಉದ್ಯೋಗಿಯಾಗಿದ್ದರು. ಪರ್ಲಿಯಾ ನೂರಾನಿಯಾ ಎಸೋಸಿಯೇಶನ್, ಖಿದ್ಮತುಲ್ ಇಸ್ಲಾಂ ಸಹಿತ ಹಲವು ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಇವರು ಸ್ಥಳೀಯವಾಗಿ ಸಮಾಜಮುಖಿಯಾಗಿ ಚಟುವಟಿಕೆ ನಡೆಸುವ ಮೂಲಕ ಜನಾನುರಾಗಿಯಾಗಿದ್ದರು.
ಮೃತರು ಪತ್ನಿ, ನಾಲ್ವರು ಪುತ್ರರು, ಮೂವರು ಸಹೋದರರು, ನಾಲ್ಕು ಮಂದಿ ಸಹೋದರಿಯರ ಸಹಿತ ಅಪಾತ ಬಂಧು-ಬಳಗವನ್ನು ಅಗಲಿದ್ದಾರೆ. ಓರ್ವ ಪುತ್ರ ಹಾಗೂ ಸಹೋದರ ಕೊಲ್ಲಿ ದೇಶದಿಂದ ಬರುತ್ತಿರುವ ಹಿನ್ನಲೆಯಲ್ಲಿ ಮೃತರ ದಫನ ಕಾರ್ಯವು ಭಾನುವಾರ ಬೆಳಿಗ್ಗೆ (ಡಿ 8) 7 ಗಂಟೆ ವೇಳೆಗೆ ಪರ್ಲಿಯಾ ಮಸೀದಿಯಲ್ಲಿ ನಡೆಯಲಿದೆ ಎಂದು ಅವರ ಸಹೋದರ ಉಮ್ಮರ್ ಶರೀಫ್ ಅವರು ಪತ್ರಿಕೆಗೆ ತಿಳಿಸಿದ್ದಾರೆ.
0 comments:
Post a Comment