ನವದೆಹಲಿ, ಡಿಸೆಂಬರ್ 24, 2024 (ಕರಾವಳಿ ಟೈಮ್ಸ್) : ಡಾಕ್ಯುಮೆಂಟ್ ಸ್ಕ್ಯಾನ್ ಮಾಡಲು ಇನ್ನು ಬೇರೆ ಬೇರೆ ಆಪ್ ಗಳನ್ನು ಉಪಯೋಗಿಸುವ ಅಗತ್ಯವಿಲ್ಲ. ಇದಕ್ಕೆ ಪರಿಹಾರ ಕಂಡುಕೊಂಡಿರುವ ವ್ಯಾಟ್ಸಾಪ್ ತನ್ನ ಬಳಕೆದಾರರಿಗೆ ಇದೀಗ ಮತ್ತೊಂದು ಹೊಸ ಫೀಚರ್ ಪರಿಚಯಿಸಿದೆ. ಇನ್ನು ಮುಂದೆ ಡಾಕ್ಯುಮೆಂಟ್ ಸ್ಕ್ಯಾನ್ ಮಾಡಲು ವ್ಯಾಟ್ಸಾಪ್ ಮೂಲಕವೇ ಅವಕಾಶ ಲಭ್ಯವಾಗಲಿದೆ.
ವ್ಯಾಟ್ಸಾಪ್ ಹೊಸ ಅಪ್‍ಡೇಟ್ ಮಾಡಿದೆ. ಇದರಲ್ಲಿ ಸ್ಕ್ಯಾನ್ ಫೀಚರ್ ಪರಿಚಯಿಸಿದೆ. ಇತ್ತೀಚೆಗೆ ವ್ಯಾಟ್ಸಾಪ್ ತನ್ನ ಬಳಕೆದಾರರಿಗೆ ಡಾಕ್ಯುಮೆಂಟ್ ಸ್ಕ್ಯಾನ್ ಫೀಚರ್ ನೀಡಿದೆ. ತನ್ನ ಹೊಸ ಫೀಚರ್ ಕುರಿತು ವ್ಯಾಟ್ಸಾಪ್ ಸ್ಪಷ್ಟಪಡಿಸಿದೆ.
ಸಾಮಾನ್ಯವಾಗಿ ವ್ಯಾಟ್ಸಾಪ್ ಬಳಕೆದಾರರು ಡಾಕ್ಯುಮೆಂಟ್ ಸ್ಕ್ಯಾನ್‍ಗಾಗಿ ಬೇರೆ ಬೇರೆ ಆಪ್ ಬಳಸಬೇಕಿತ್ತು. ಬೇರೆ ಆಪ್ ಮೂಲಕ ಡಾಕ್ಯುಮೆಂಟ್ ಸ್ಕ್ಯಾನ್ ಮಾಡಿ ಸೇವ್ ಮಾಡಿಕೊಂಡು ವ್ಯಾಟ್ಸಾಪ್ ಮೂಲಕ ಕಳುಹಿಸಬೇಕಿತ್ತು. ಇದೀಗ ಇದೆಲ್ಲವೂ ಒಂದೇ ಆಪ್ ವ್ಯಾಟ್ಸಾಪ್ ಮೂಲಕ ನಡೆಯಲಿದೆ. ಬಳಕೆದಾರರು ವ್ಯಾಟ್ಸಾಪ್ ಕ್ಯಾಮೆರಾ ಒನ್ ಮಾಡಿ, ಫೆÇೀಟೋ ಅಥವಾ ಸ್ಕ್ಯಾನ್ ಆಯ್ಕೆ ಕ್ಲಿಕ್ ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ವ್ಯಾಟ್ಸಾಪ್ ಕ್ಯಾಮೆರಾ ಫೆÇೀಟೋ ಆಯ್ಕೆಯಲ್ಲಿರುತ್ತದೆ. ಆದರೆ ಡಾಕ್ಯುಮೆಂಟ್ ಸ್ಕ್ಯಾನ್ ಬೇಕಿದ್ದಲ್ಲಿ ಸ್ಕ್ಯಾನ್ ಆಯ್ಕೆ ಟ್ಯಾಪ್ ಮಾಡಿದರೆ ಸಾಕು. ಬಳಿಕ ಡಾಕ್ಯುಮೆಂಟ್ ಸ್ಕ್ಯಾನ್ ಮಾಡಬಹುದು. ಸೇವ್ ಮಾಡುವಾಗ ಜೆಪಿಜಿ, ಪಿಡಿಎಫ್ ಅಥವಾ ಇತರ ಮಾದರಿ ಕೇಳಲಿದೆ. ಈ ವೇಳೆ ನಿಮ್ಮ ಆಯ್ಕೆ ಕೊಟ್ಟರೆ ಸ್ಕ್ಯಾನ್ ಕಾಪಿ ಸೇವ್ ಆಗಲಿದೆ. ಸೆಂಡ್ ನೀಡಿದರೆ ಈ ಕಾಪಿಯನ್ನು ವ್ಯಾಟ್ಸಾಪ್ ಮೂಲಕ ಕಳುಹಿಸಬಹುದು.
ಸ್ಕ್ಯಾನ್ ಡಾಕ್ಯುಮೆಂಟ್ ಎಡ್‍ಜಸ್ಟ್ ಮಾಡಲು ಸಾಧ್ಯವಿದೆ. ಅನಗತ್ಯ ಭಾಗಗಳನ್ನು ಕತ್ತರಿಸಿ ಡಾಕ್ಯುಮೆಂಟ್ ಸರಿಯಾಗಿ ಕಾಣುವಂತೆ ಮಾಡಲು ಸಾಧ್ಯವಿದೆ. ಇಷ್ಟೇ ಅಲ್ಲ ನಿಮ್ಮ ಡಾಕ್ಯುಮೆಂಟ್ ಮಡಚಿದ ಗುರುತು, ಪುಡಿಯಾಗಿರುವ ಗುರುತುಗಳಿದ್ದರೂ ಇಲ್ಲಿ ಎಲ್ಲವೂ ಸರಿಯಾಗಲಿದೆ. ಇಷ್ಟೇ ಅಲ್ಲ, ಅತ್ಯುತ್ತಮ ಗುಣಮಟ್ಟದ ಡಾಕ್ಯುಮೆಂಟ್ ಆಗಿ ಸೇವ್ ಆಗಲಿದೆ. ಹೊಸ ಫೀಚರ್ ಬಳಸಿಕೊಳ್ಳಲು ಬಳಕೆದಾರರು ತಮ್ಮ ವ್ಯಾಟ್ಸಾಪ್ ಆಪ್‍ಡೇಟ್ ಮಾಡಿಕೊಳ್ಳಬೇಕು. ಈ ಮೂಲಕ ವ್ಯಾಟ್ಸಾಪ್ ಹೊಸ ಫೀಚರ್ ಪಡೆಯಬಹುದು.
0 comments:
Post a Comment