ಬಂಟ್ವಾಳ, ಡಿಸೆಂಬರ್ 21, 2024 (ಕರಾವಳಿ ಟೈಮ್ಸ್) : ವಿಟ್ಲ ಸಮೀಪದ ನೆಲ್ಲಿಗುಡ್ಡೆ ನೂರುಲ್ ಹುದಾ ಜುಮಾ ಮಸೀದಿಯ ನೂತನ ಗೌರವಾಧ್ಯಕ್ಷರಾಗಿ ಮರ್ ಹೂಂ ಸಯ್ಯಿದ್ ಕೂರತ್ ತಂಙಳ್ ಅವರ ಸುಪುತ್ರ ಸಯ್ಯಿದ್ ಮಸ್ ಊದ್ ಅಲ್-ಬುಖಾರಿ ಕೂರತ್ ಅವರನ್ನು ಆಯ್ಕೆ ಮಾಡಲಾಗಿದೆ.
ಇತ್ತೀಚೆಗೆ ನಡೆದ ಮಸೀದಿ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ. ಮಸೀದಿ ಆಡಳಿತ ಸಮಿತಿಗೆ ಖುರ್ರತುಸ್ಸಾದಾತ್ ಅವರು ಮೂರು ವರ್ಷಕ್ಕೆ ಆಯ್ಕೆ ಮಾಡಿದ ಅಬೂಬಕ್ಕರ್ ಪಿ ಅವರ ನೇತೃತ್ವದ ಪ್ರಸ್ತುತ ಕಮಿಟಿಯನ್ನು ಮುಂದುವರಿಸಲು ತೀರ್ಮಾನ ಕೈಗೊಳ್ಳಲಾಯಿತು.
ಕಮಿಟಿಯಲ್ಲಿ ತೆರವಾದ ಸ್ಥಾನಕ್ಕೆ ಲೆಕ್ಕ ಪರಿಶೋಧಕರಾಗಿ ಅಬ್ದುಲ್ ರಹಿಮಾನ್ ಎಸ್ ಐ ಮತ್ತು ಇಸ್ಮಾಯಿಲ್ ಹಾಜಿ ಸೌತ್ ಇಂಡಿಯಾ ಹಾಗೂ ಶಬೀರ್ ಸಾಹಿಬ್ ಅವರನ್ನು ಸದಸ್ಯರಾಗಿಯೂ ಸರ್ವಾನುಮತದಿಂದ ಆರಿಸಲಾಯಿತು
ಮಸೀದಿ ಪ್ರಧಾನ ಕಾರ್ಯದರ್ಶಿ ಮುಸ್ತಾಕ್ ಬೇಗ್ ವರದಿ ಮಂಡಿಸಿದರು. ಸ್ಥಳೀಯ ಖತೀಬ್ ಉನೈಸ್ ಸಖಾಫಿ ಅಲ್-ಅಫ್ಳಲಿ ಅಲ್-ಅರ್ಷದಿ ಸ್ವಾಗತಿಸಿದರು.
0 comments:
Post a Comment