ಉಪ್ಪಿನಂಗಡಿ, ಡಿಸೆಂಬರ್ 11, 2024 (ಕರಾವಳಿ ಟೈಮ್ಸ್) : ಇಲ್ಲಿನ ಬಸು ಬಸ್ ನಿಲ್ದಾಣದ ಹಿಂಬದಿಯ ನಿರ್ಮಾಣ ಹಂತದ ಗ್ರಂಥಾಲಯ ಕಟ್ಟಡದಲ್ಲಿ ಡಿ 4 ರಂದು ಹೊರ ರಾಜ್ಯದ ವ್ಯಕ್ತಿಯ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕು, ಕಲ್ಮಂಜ ಗ್ರಾಮದ ಕನ್ಯಾಡಿ ನಿವಾಸಿ ಬಾಬು ಅಲಿಯಾಸ್ ರುದ್ರ (68) ಎಂದು ಗುರುತಿಸಲಾಗಿದೆ.
ಉಪ್ಪಿನಂಗಡಿ ಹೊಸ ಬಸ್ ನಿಲ್ದಾಣದ ಹಿಂಬದಿಯಲ್ಲಿರುವ ನಿರ್ಮಾಣ ಹಂತದ ಗ್ರಂಥಾಲಯ ಕಟ್ಟಡದ ಮೊದಲ ಮಹಡಿಯ ಮೇಲೆ ಅಸ್ಸಾಂ ಮೂಲದ ಸುಮಾರು 30-35 ವರ್ಷದ ದೀಪಕ್ ಎಂಬ ವ್ಯಕ್ತಿಯ ಮೃತದೇಹ ಡಿಸೆಂಬರ್ 4 ರಂದು ಬುಧವಾರ ಬೆಳಿಗ್ಗೆ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿತ್ತು. ಮೃತದೇಹದ ಹಣೆ ಮತ್ತು ತಲೆಯಲ್ಲಿ ರಕ್ತದ ಗಾಯಗಳು ಕಂಡು ಬಂದಿರುವ ಹಿನ್ನಲೆಯಲ್ಲಿ ಕೊಲೆ ಶಂಕೆ ವ್ಯಕ್ತಪಡಿಸಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಗ್ರೇಡ್-1 ಕಾರ್ಯದರ್ಶಿ ಶ್ರೀಮತಿ ಗೀತಾ ಬಿ ಅವರು ಉಪ್ಪಿನಂಗಡಿ ಪೆÇಲೀಸರಿಗೆ ದೂರು ನೀಡಿದ್ದರು.
ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿ ಬಾಬು @ ರುದ್ರ (68) ಎಂಬಾತನನ್ನು ಉಳ್ಳಾಲ ತಾಲೂಕಿನ ದೇರಳಕಟ್ಟೆ ಎಂಬಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯ ಶೀಘ್ರ ಪತ್ತೆ ಕಾರ್ಯದಲ್ಲಿ ಜಿಲ್ಲಾ ಎಸ್ಪಿ ಯತೀಶ್ ಎನ್, ಅಡಿಶನಲ್ ಎಸ್ಪಿ ರಾಜೇಂದ್ರ ಡಿ ಎಸ್ ಅವರ ನಿರ್ದೇಶನದಂತೆ, ಪುತ್ತೂರು ಎಎಸ್ಪಿ ಅರುಣ್ ಗೌಡ ಅವರ ಮಾರ್ಗದರ್ಶನದಲ್ಲಿ, ಉಪ್ಪಿನಂಗಡಿ ಪೊಲೀಸ್ ಇನ್ಸ್ ಪೆಕ್ಟರ್ ರವಿ ಬಿ ಎಸ್ ಅವರ ನೇತೃತ್ವದಲ್ಲಿ, ಉಪ್ಪಿನಂಗಡಿ ಪೆÇಲೀಸ್ ಠಾಣಾ ಪೆÇಲೀಸ್ ಪಿಎಸ್ಸೈ ಅವಿನಾಶ್ ಎಚ್, ಸಿಬ್ಬಂದಿಗಳಾದ ಶಿವರಾಮ್, ಹಿತೋಷ್, ಗಿರೀಶ್, ರಾಮಣ್ಣ ಗೌಡ, ಹೇಮರಾಜ್, ಮಹದೇವ, ನಾಗರಾಜ್, ಪುತ್ತೂರು ಗ್ರಾಮಾಂತರ ಠಾಣಾ ಸಿಬ್ಬಂದಿ ಪ್ರವೀಣ್ ರೈ, ಬಂಟ್ವಾಳ ಗ್ರಾಮಾಂತರ ಠಾಣಾ ಸಿಬ್ಬಂದಿ ಹರಿಶ್ಚಂದ್ರ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ದಿವಾಕರ್ ಅವರುಗಳ ವಿಶೇಷ ತಂಡ ಕಾರ್ಯನಿರ್ವಹಿಸಿದೆ.
0 comments:
Post a Comment