ಬಂಟ್ವಾಳ, ಡಿಸೆಂಬರ್ 09, 2024 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪವಿಭಾಗ ಬಂಟ್ವಾಳ ಇಲ್ಲಿನ ಸಹಾಯಕ ಇಂಜಿನಿಯರ್ ಕೃಷ್ಣ ಪತ್ತಾರ ಅವರ ಸುಪುತ್ರಿ ಡಾ ಕೋಮಲ (ಬಿಎಎಂಎಸ್) ಅವರ ವಿವಾಹವು ಬೆಳಗಾವಿ ಕಾಕತಿ ನಿವಾಸಿ ಚನ್ನಪ್ಪ ಪತ್ತಾರ ಅವರ ಸುಪುತ್ರ ಕಿರಣ್ (ಬಿಇ-ಮೆಕ್) ಎಂಬ ವರನೊಂದಿಗೆ ನಡೆದಿದ್ದು, ಈ ಪ್ರಯುಕ್ತ ವಿವಾಹ ಅರತಕ್ಷತೆ ಕಾರ್ಯಕ್ರಮವು ಡಿಸೆಂಬರ್ 9 ರಂದು ಸೋಮವಾರ ಸಜಿಪಮುನ್ನೂರು-ಕಂದೂರು ಬಜಾರ್ ಆಡಿಟೋರಿಯಂ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖಾಧಿಕಾರಿ-ಸಿಬ್ಬಂದಿಗಳು, ರಾಜಕೀಯ, ಸಾಮಾಜಿಕ ಗಣ್ಯರು, ಕುಟುಂಬಿಕರು, ಬಂಧು-ಮಿತ್ರರು ಭಾಗವಹಿಸಿ ನೂತನ ವಧೂ-ವರರಿಗೆ ಶುಭ ಹಾರೈಸಿದರು.
0 comments:
Post a Comment