ಬೆಳ್ತಂಗಡಿ, ಡಿಸೆಂಬರ್ 10, 2024 (ಕರಾವಳಿ ಟೈಮ್ಸ್) : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ತಡೆದು ನಿಲ್ಲಿಸಿ ಅವರ ಕುತ್ತಿಗೆಯಲ್ಲಿದ್ದ ಕರಿಮಣಿ ಸರ ಎಗರಿಸಿದ ಘಟನೆ ಕೊಯ್ಯೂರು ಗ್ರಾಮದ ಪಾಂಬೇಲ್ ಕ್ರಾಸ್ ಎಂಬಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಈ ಬಗ್ಗೆ ಕೊಯ್ಯೂರು ಗ್ರಾಮದ ಆದೂರ್ ಪೆರಾಲ್ ನಿವಾಸಿ ಮಹಿಳೆ ಶ್ರೀಮತಿ ರಾಜೀವಿ (50) ಅವರು
ಪಿರ್ಯಾದಿದಾರರಾದ ಶ್ರೀಮತಿ ರಾಜೀವಿ (50) ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ಸೋಮವಾರ ಮಧ್ಯಾಹ್ನ ಬೆಳ್ತಂಗಡಿಗೆ ಬಂದಿದ್ದವರು, ತನ್ನ ಮನೆಯಾದ ಕೊಯ್ಯೂರು ಗ್ರಾಮದ ಪಾಂಬೇಲ್ ಕ್ರಾಸಿನಲ್ಲಿ ಇಳಿದು ಕೋರಿಯಾರ್ ಮನೆಗೆ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಆರೋಪಿತ ಉಮೇಶ ಗೌಡ ಎಂಬಾತ ಹಿಂದಿನಿಂದ ಓಡಿ ಬಂದು ಮಹಿಳೆಯನ್ನು ತಡೆದು ನಿಲ್ಲಿಸಿ, ಮಹಿಳೆಯ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು ಬೊಬ್ಬೆ ಹಾಕಬೇಡಿ ಎಂದು ಬೆದರಿಸಿ ಕುತ್ತಿಗೆಯಲ್ಲಿದ್ದ ಸುಮಾರು 32 ಗ್ರಾಂ ತೂಕದ ಚಿನ್ನದ ಕರಿ ಮಣಿ ಸರವನ್ನು ಎಳೆದಿರುತ್ತಾನೆ.
ಈ ವೇಳೆ ರಾಜೀವಿ ಅವರು ಕರಿಮಣಿ ಸರವನ್ನು ಹಿಡಿದು ಜೋರಾಗಿ ಬೊಬ್ಬೆ ಹಾಕಿದ್ದು, ಕರಿ ಮಣಿ ಸರದ ಒಂದು ಭಾಗ ಮಹಿಳೆಯ ಕೈಯಲ್ಲಿ ಮತ್ತು ಇನ್ನೊಂದು ಭಾಗ ಆರೋಪಿ ಉಮೇಶ ಗೌಡನ ಕೈಯಲ್ಲಿತ್ತು. ಆರೋಪಿ ಎಳೆದ ರಭಸಕ್ಕೆ ಮಹಿಳೆಯ ಕುತ್ತಿಗೆಗೆ ಮತ್ತು ಎದೆಯ ಭಾಗಕ್ಕೆ ಗಾಯವಾಗಿರುತ್ತದೆ. ಮಹಿಳೆಯ ಬೊಬ್ಬೆ ಕೇಳಿದ ಹತ್ತಿರದ ಮನೆಯವರು ಓಡಿ ಬರುತ್ತಿರುವುದನ್ನು ಕಂಡು ಆರೋಪಿತ ಮಹಿಳೆಯ ಕೈಯಲ್ಲಿ ಉಳಿದಿದ್ದ ಕರಿಮಣಿ ಸರದ ಭಾಗವನ್ನು ಬಿಟ್ಟು ಆತನ ಕೈಯಲ್ಲಿದ್ದ ಕರಿಮಣಿ ಸರದ ಭಾಗವನ್ನು ಹಿಡಿದುಕೊಂಡು ಓಡಿ ತಪ್ಪಿಸಿಕೊಂಡಿರುತ್ತಾನೆ. ಆರೋಪಿ ಕೊಂಡುಹೋದ ಕರಿಮಣಿ ಸರದ ಭಾಗದಲ್ಲಿ ಸುಮಾರು 16 ಗ್ರಾಂ ಚಿನ್ನ ಇರಬಹುದು. ಅದರ ಅಂದಾಜು ಮೌಲ್ಯ 1 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ತನಗಾದ ಗಾಯದ ಬಗ್ಗೆ ಮಹಿಳೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಬಗ್ಗೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment