ಬಂಟ್ವಾಳ, ಡಿಸೆಂಬರ್ 24, 2024 (ಕರಾವಳಿ ಟೈಮ್ಸ್) : ಇರಾ ಗ್ರಾಮದ ಕುಕ್ಕಾಜೆ-ಕಾಪಿಕಾಡ್ ಫ್ರೆಂಡ್ಸ್ ವತಿಯಿಂದ 3ನೇ ವರ್ಷದ ಕಾಪಿಕಾಡ್ ಕ್ರೀಡೋತ್ಸವ ಡಿಸೆಂಬರ್ 21 ಹಾಗೂ 22 ರಂದು ಕಾಪಿಕಾಡ್ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು.
ಕ್ರೀಡಾಕೂಟದಲ್ಲಿ ವಾಲಿಬಾಲ್, ಕ್ರಿಕೆಟ್, ಕೇರಂ, ಕಬಡ್ಡಿ ಹಾಗೂ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟಗಳು ನಡೆದಿದ್ದು, ವಿವಿಧ ತಂಡಗಳಾಗಿ ಗ್ರಾಮಸ್ಥರು ಭಾಗವಹಿಸಿದ್ದರು.
ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಇರಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಸ್ಥಳೀಯ ವಾರ್ಡಿನ ಹಾಲಿ ಸದಸ್ಯ ಅಬ್ದುಲ್ ರಝಾಕ್ ಕುಕ್ಕಾಜೆ, ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ ಎಂ ಇಬ್ರಾಹಿಂ, ನಜೀಬ್ ಎ ಎಸ್ ಆರ್, ಅಬ್ದುಲ್ ಹಮೀದ್ ಸೌದಿ ಅರೇಬಿಯಾ (ಕೆ ಎಸ್ ಎ), ಸುಫೈದ್, ಅಬ್ಬಾಸ್ ಹಾಜಿ ಕಾಪಿಕಾಡು, ಜಲೀಲ್ ಕಾಪಿಕಾಡು ಮೊದಲಾದವರು ಭಾಗವಹಿಸಿದ್ದರು. ಶಾಪಿ ಕಾಪಿಕಾಡು ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment