ಬೆಂಗಳೂರು, ಡಿಸೆಂಬರ್ 01, 2024 (ಕರಾವಳಿ ಟೈಮ್ಸ್) : ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್.ಎಸ್.ಆರ್.ಪಿ) ಅಳವಡಿಸಲು ವಿಧಿಸಲಾಗಿದ್ದ ಅಂತಿಮ ದಿನಾಂಕವನ್ನು ರಾಜ್ಯ ಸರಕಾರ ಮತ್ತೆ ವಿಸ್ತರಿಸಿ ವಾಹನ ಚಾಲಕರಿಗೆ ದಂಡದಿಂದ ವಿನಾಯಿತಿ ಪಡೆಯಲು ಮತ್ತಷ್ಟು ಅವಕಾಶ ನೀಡಿದೆ.
ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಡಿಸೆಂಬರ್ 4ರವರೆಗೆ ಈ ಹಿಂದೆ ದಿನಾಂಕ ವಿಸ್ತರಿಸಲಾಗಿತ್ತು. ಇದೀಗ ಅಂತಿಮ ದಿನಾಂಕವನ್ನು ವರ್ಷಾಂತ್ಯದವರೆಗೆ ಅಂದರೆ ಡಿಸೆಂಬರ್ 31 ರವರೆಗೆ ವಿಸ್ತರಿಸಿ ರಾಜ್ಯ ಸರಕಾರ ಆದೇಶಿಸಿದೆ. ರಾಜ್ಯದಲ್ಲಿ ಸುಮಾರು 2 ಕೋಟಿಯಷ್ಟು ವಾಹನಗಳು ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕಿತ್ತು. ಸದ್ಯ 55 ಲಕ್ಷ ವಾಹನಗಳು ಮಾತ್ರ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿದೆ. ಇದೀಗ ರಾಜ್ಯ ಸಾರಿಗೆ ಇಲಾಖೆ ಐದನೇ ಬಾರಿಗೆ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸುವ ಅಂತಿಮ ದಿನಾಂಕ ವಿಸ್ತರಣೆ ಮಾಡಿರುವ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
0 comments:
Post a Comment