ನನಗಿಂತ ಉನ್ನತ ಹುದ್ದೆಗೇರಲು ಪ್ರೇರಣೆಯಾಗಲು ನನ್ನನ್ನು ಶಾಲಾಡಳಿತ ಮಂಡಳಿ ಇಲ್ಲಿ ತಂದು ನಿಲ್ಲಿಸಿದ್ದಾರೆ : ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದ ಸ್ಪೀಕರ್ ಖಾದರ್
ಗೋಳ್ತಮಜಲು ಜೆಮ್ ಶಾಲಾ ಬೆಳ್ಳಿ ಹಬ್ಬ ಆಚರಣೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ
ಬಂಟ್ವಾಳ, ಡಿಸೆಂಬರ್ 08, 2024 (ಕರಾವಳಿ ಟೈಮ್ಸ್) : ಶಾಲೆಗಳ ಸ್ಥಿತಿ ಗತಿ ನೋಡಿದರೆ ಆ ಊರಿನ ಸ್ಥಿತಿ ಗತಿ ಮನವರಿಕೆ ಆಗುತ್ತದೆ. ಊರಿನ ಶಾಲೆಗಳು ಉತ್ತಮ ಸ್ಥಿತಿಯಲ್ಲಿದ್ದರೆ ಆ ಊರಿನ ಜನರೂ ಕೂಡ ಉತ್ತಮ ಸಂಸ್ಕೃತಿ ಹೊಂದಿದ್ದಾರೆ ಎಂದೆ ಅರ್ಥ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಅಭಿಪ್ರಾಯಪಟ್ಟರು.
ಕಲ್ಲಡ್ಕ ಸಮೀಪದ ಗೋಳ್ತಮಲು ಫಾತಿಮಾ ಮೆಮೋರಿಯಲ್ ಎಜ್ಯುಕೇಶನಲ್ ಟ್ರಸ್ಟ್ (ರಿ) ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಜೆಮ್ ಪಬ್ಲಿಕ್ ಸ್ಕೂಲ್ ಇದರ ಬೆಳ್ಳಿ ಹಬ್ಬ ಆಚರಣೆ ಹಾಗೂ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಶನಿವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಬೆಳ್ಳಿಹಬ್ಬ ಸ್ಮರಣ ಸಂಚಿಕೆ ‘ರಜತ ರತ್ನ’ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಶಾಲೆಗಳ ಅಭಿವೃದ್ಧಿಗೆ ಹೆತ್ತವರ-ಪೆÇೀಷಕರ ಹಾಗೂ ಊರವರ ಸಹಕಾರ ಅತೀ ಅಗತ್ಯವಾಗಿದೆ. ಶಾಲೆಗಳ ಕ್ಷುಲ್ಲಕ ಸಮಸ್ಯೆಗಳನ್ನು ಊರಿಡೀ ಹೇಳಿ ನಡೆಯುವುದಕ್ಕಿಂತ ಅದಕ್ಕೆ ಎಲ್ಲರೂ ಸೇರಿಕೊಂಡು ಪರಿಹಾರ ಕಂಡುಕೊಂಡಾಗ ಶಾಲೆಗಳ ಅಭಿವೃದ್ಧಿ ಸಾಧ್ಯ ಎಂದರು.
ಶಾಲಾ ವಾರ್ಷಿಕೋತ್ಸವ ಅಂದರೆ ವಿದ್ಯಾರ್ಥಿಗಳ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಅನಾವರಣಕ್ಕೆ ಪ್ರಮುಕ ವೇದಿಕೆಯಾಗಿದೆ. ಶಾಲಾ ವಾರ್ಷಿಕೋತ್ಸವಗಳು ಮಕ್ಕಳಿಗೂ ಪೆÇೀಷಕರಿಗೂ ಹಬ್ಬದ ವಾತಾವರಣ ಸೃಷ್ಟಿಸುವ ಕಾರ್ಯಕ್ರಮ ಆಗಿದ್ದು, ಅದು ಉತ್ತಮ ರೀತಿಯಲ್ಲಿ ವರ್ಣರಂಜಿತವಾಗಿ ಮೂಡಿಬರಬೇಕು ಎಂದ ರೈ
ಇಳಿ ವಯಸ್ಸಿನಲ್ಲೂ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಚುರುಕುತನ ಹಾಗೂ ಅತ್ಯುತ್ಸಾಹ ತೋರುತ್ತಿದ್ದ ದಿವಂಗತ ಹಾಜಿ ಅಬ್ದುಲ್ ಖಾದರ್ ಎಲ್ಲ ಶಿಕ್ಷಣ ಪ್ರೇಮಿಗಳಿಗೂ ಮಾದರಿ ಆಗಿದ್ದರು. ಅವರ ಕನಸಿನ ಕೂಸು ಆಗಿರುವ ಜೆಮ್ ಶಾಲೆ ಇಂದು ಬೆಳ್ಳಿ ಹಬ್ಬ ಆಚರಿಸುತ್ತಿರುವುದು ಸಂತೋಷ ತಂದಿದೆ ಎಂದು ಇದೇ ವೇಳೆ ಸ್ಮರಿಸಿಕೊಂಡರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಮಾತನಾಡಿ, ಶಾಸಕನಾಗಿ, ಮಂತ್ರಿಯಾಗಿ, ವಿರೋಧ ಪಕ್ಷದ ಉಪನಾಯಕನಾಗಿ ಇದೀಗ ವಿಧಾನಸಭೆಯ ಅಧ್ಯಕ್ಷನಾಗಿ ಹಲವು ಹುದ್ದೆಗೇರಿದರೂ ಒಂದು ಕಾಲದಲ್ಲಿ ನಾನೂ ಕೂಡ ನಿಮ್ಮಂತಹ ವಿದ್ಯಾರ್ಥಿಯಾಗಿದ್ದೆ. ನೀವು ಕೂಡಾ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಿ ನನಗಿಂತಲೂ ದೊಡ್ಡ ಹುದ್ದೆಗೆ ಏರಬಹುದು ಎಂಬುದನ್ನು ಹೇಳಲು ಶಾಲಾಡಳಿತ ಮಂಡಳಿ ನನ್ನನ್ನು ಇಲ್ಲಿಗೆ ಕರೆದು ತಂದು ನಿಲ್ಲಿಸಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಮಾತುಗಳನ್ನಾಡಿದರು.
ಫಾತಿಮಾ ಮೆಮೋರಿಯಲ್ ಎಜ್ಯುಕೇಶನಲ್ ಟ್ರಸ್ಟ್ ಚೆಯರ್ ಮ್ಯಾನ್ ಹಾಜಿ ಜಿ ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದ್ದರು. ಮುಸ್ಲಿಂ ವಿದ್ಯಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮೂಸಬ್ಬ ಪಿ ಬ್ಯಾರಿ ಅವರು ಬೆಳ್ಳಿಹಬ್ಬ ನಾಮಫಲಕ ಅನಾವರಣಗೊಳಿಸಿದರು. ಉದ್ಯಮಿ ರೊನಾಲ್ಡ್ ಮಾರ್ಟಿಸ್ ವಸ್ತು ಪ್ರದರ್ಶನ ಉದ್ಘಾಟಿಸಿದರು.
ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಾ ಪುರುಷೋತ್ತಮ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ ಜಿ, ಬಂಟ್ವಾಳ ಎಪಿಎಂಸಿ ಮಾಜಿ ಅಧ್ಯಕ್ಷ ಕೆ ಪದ್ಮನಾಭ ರೈ ಅತಿಥಿಗಳಾಗಿದ್ದರು. ಕಾಲೇಜು ಉಪನ್ಯಾಸಕ, ಸ್ಮರಣ ಸಂಚಿಕೆ ಸಂಪಾದಕ ಅಬ್ದುಲ್ ರಝಾಕ್ ಅನಂತಾಡಿ, ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಅಬ್ದುಲ್ ಹಮೀದ್ ಗೋಳ್ತಮಜಲು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಹಮೀದ್ ಅಲಿ, ಉಪಾಧ್ಯಕ್ಷೆ ಪುಷ್ಪ ಸತೀಶ್, ಶಾಲಾ ವಿದ್ಯಾರ್ಥಿ ನಾಯಕರಾದ ಮುಹಮ್ಮದ್ ಅಲ್-ಝೀಶಾನ್ ಹಾಗೂ ಫಾತಿಮಾ ಫಹೀಮಾ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಸಂಸ್ಥೆಯ ಟ್ರಸ್ಟಿ ಹಾಜಿ ಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ಮತ್ತು ಕಲ್ಲಡ್ಕ ಮ್ಯೂಸಿಯಂ ಇದರ ಕೆ ಎಸ್ ಯಾಸೀರ್ ಕಲ್ಲಡ್ಕ ಹಾಗೂ ಉದ್ಯಮಿ ರೊನಾಲ್ಡ್ ಮಾರ್ಟಿಸ್ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಕಿ ನಾಝಿಯಾ ಸ್ವಾಗತಿಸಿ, ಫಾತಿಮಾ ಮೆಮೋರಿಯಲ್ ಎಜ್ಯುಕೇಶನಲ್ ಟ್ರಸ್ಟ್ ಇದರ ಮ್ಯಾನೇಜಿಂಗ್ ಟ್ರಸ್ಟಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಮಾಜಿಕ ಸಂಘಟಕ ಹಾಜಿ ಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ಪ್ರಸ್ತಾವನೆಗೈದರು. ಶಾಲಾ ಮುಖ್ಯ ಶಿಕ್ಷಕ ನಿರಂಜನ್ ಡಿ ವಂದಿಸಿದರು. ಶಾಲಾ ಸಂಚಾಲಕ ಹಾಜಿ ಜಿ ಅಹ್ಮದ್ ಮುಸ್ತಫಾ ಕಾರ್ಯಕ್ರಮ ನಿರೂಪಿಸಿದರು.
ಡಿಸೆಂಬರ್ 8 ರಂದು ಭಾನುವಾರ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫಾತಿಮಾ ಮೆಮೋರಿಯಲ್ ಎಜ್ಯುಕೇಶನಲ್ ಟ್ರಸ್ಟ್ ಇದರ ಮ್ಯಾನೇಜಿಂಗ್ ಟ್ರಸ್ಟಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಮಾಜಿಕ ಸಂಘಟಕ ಹಾಜಿ ಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ವಹಿಸಿದ್ದರು. ಉದ್ಯಮಿ ಮುಸ್ತಫಾ ಎಸ್ ಎಂ ಮಂಗಳೂರು ಹಾಗೂ ಆದಿಲ್ ಸೂಫಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಲಾ ಸಂಚಾಲಕ ಹಾಜಿ ಜಿ ಅಹ್ಮದ್ ಮುಸ್ತಪ, ಮದ್ರಸ ಮುಖ್ಯ ಶಿಕ್ಷಕ ಯಹ್ಯಾ ದಾರಿಮಿ, ಉದ್ಯಮಿಗಳಾದ ಶರೀಫ್ ಹಾಜಿ ಗೋಳ್ತಮಜಲು, ಇಂತಿಯಾಝ್ ಅಹ್ಮದ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಹಮೀದ್ ಅಲಿ, ಹಮೀದ್ ಗೋಳ್ತಮಜಲು, ಶಾಲಾ ವಿದ್ಯಾರ್ಥಿ ನಾಯಕರಾದ ಮುಹಮ್ಮದ್ ಅಲ್-ಝೀಶಾನ್ ಹಾಗೂ ಫಾತಿಮಾ ಫಹೀಮಾ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ವಾರ್ಷಿಕ ವರದಿ ಮಂಡಿಸಿದರು. ಶಿಕ್ಷಕರಾದ ಎನ್ ಎಚ್ ನೌಝಿಯಾ ಸ್ವಾಗತಿಸಿ, ಜಯಂತಿ ವಂದಿಸಿದರು. ತಾಹಿರಾ ಎಸ್ ಹಾಗೂ ನಾಝಿಯಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಡೆಯಿತು.
ಈ ಪ್ರಯುಕ್ತ ಡಿಸೆಂಬರ್ 6 ರಂದು ಶುಕ್ರವಾರ ಬೆಳಿಗ್ಗೆ 9.30ಕ್ಕೆ ಫಾತಿಮಾ ಮೆಮೋರಿಯಲ್ ಎಜ್ಯುಕೇಶನಲ್ ಟ್ರಸ್ಟ್ ವೈಸ್ ಚೆಯರ್ ಮ್ಯಾನ್ ಹಾಜಿ ಜಿ ಅಬ್ದುಲ್ ರಝಾಕ್ ಅವರು ಧ್ವಜಾರೋಹಣಗೈದರು.
0 comments:
Post a Comment