ಮಂಗಳೂರು, ಡಿಸೆಂಬರ್ 20, 2024 (ಕರಾವಳಿ ಟೈಮ್ಸ್) : ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಒತ್ತಾಯಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಶುಕ್ರವಾರ ಬೆಳಿಗ್ಗೆ ಮಂಗಳೂರು ಮಿನಿ ವಿಧಾನಸೌಧದ ಬಳಿ ಪ್ರತಿಭಟನೆ ನಡೆಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್, ಕೆಪಿಸಿಸಿ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ, ಬ್ಲಾಕ್ ಅಧ್ಯಕ್ಷರಾದ ಸುರೇಂದ್ರ ಕಂಬಳಿ, ಪ್ರಕಾಶ್ ಸಾಲ್ಯಾನ್, ಪುರುಷೋತ್ತಮ ಚಿತ್ರಾಪುರ, ಮನಪಾ ವಿಪಕ್ಷ ನಾಯಕ ಅನಿಲ್ ಕುಮಾರ್, ಅಲ್ಪಸಂಖ್ಯಾತ ಘಟಕಾಧ್ಯಕ್ಷ ಕೆ ಕೆ ಶಾಹುಲ್ ಹಮೀದ್, ಪ್ರಮುಖರಾದ ಸುರೇಶ್ ಬಳ್ಳಾಲ್, ಕೆ. ಹರಿನಾಥ್, ಸದಾಶಿವ್ ಉಳ್ಳಾಲ್, ಅಬ್ದುಲ್ ರವೂಫ್, ಕೆ.ಪಿ. ಥೋಮಸ್, ಭರತ್ ಮುಂಡೋಡಿ, ಕೆ. ಅಶ್ರಫ್, ಪದ್ಮನಾಭ ಅಮೀನ್, ಶಾಲೆಟ್ ಪಿಂಟೋ, ಬಿ ಎಂ ಅಬ್ಬಾಸ್ ಅಲಿ, ಟಿ. ಹೊನ್ನಯ್ಯ, ನೀರಜ್ ಚಂದ್ರ ಪಾಲ್, ಟಿ.ಕೆ. ಸುಧೀರ್, ಜಯಶೀಲ ಅಡ್ಯಂತಾಯ, ಎ.ಸಿ. ವಿನಯರಾಜ್, ಸತೀಶ್ ಪೆಂಗಲ್, ಚೇತನ್ ಬೆಂಗ್ರೆ, ಕೆ. ಅಪ್ಪಿ, ಗಿರೀಶ್ ಶೆಟ್ಟಿ, ವಿಕಾಸ್ ಶೆಟ್ಟಿ, ದಿನೇಶ್ ಕುಂಪಲ, ಪ್ರೇಮ್ ಬಳ್ಳಾಲ್ ಭಾಗ್, ರಮಾನಂದ ಪೂಜಾರಿ, ನಾಗವೇಣಿ, ತನ್ವೀರ್ ಶಾ, ರೂಪ ಚೇತನ್, ಚಂದ್ರಕಲಾ ಜೋಗಿ, ಶಾಂತಲಾ ಗಟ್ಟಿ, ಸಬಿತಾ ಮಿಸ್ಕಿತ್, ಅಶ್ರಫ್ ಬಸ್ತಿಕಾರ್, ವಿಶ್ವಾಸ್ ಕುಮಾರ್ ದಾಸ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment