ಬೆಂಗಳೂರು, ಡಿಸೆಂಬರ್ 24, 2024 (ಕರಾವಳಿ ಟೈಮ್ಸ್) : ಹಲವು ಸಮಯಗಳ ಕಾಲ ತೂಗಿ ನೋಡಿದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಂತಿಮವಾಗಿ ಚಾಂಪಿಯನ್ಸ್ ಟ್ರೋಫಿ-2025ರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗುವ ಈ ಎಲೈಟ್ ಪಂದ್ಯಾವಳಿಯು ಫೆಬ್ರವರಿ 19 ರಂದು ಕರಾಚಿಯಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದೊಂದಿಗೆ ಆರಂಭಗೊಳ್ಳಲಿದೆ.
ಮಾರ್ಚ್ 9 ರಂದು ಫೈನಲ್ ಪಂದ್ಯ ದುಬೈಯಲ್ಲಿ ನಿಗದಿಯಾಗಿದ್ದು, ಭಾರತ ಪೈನಲಿಗೇರಿದರೆ ಅದಕ್ಕಾಗಿ ಮೀಸಲು ದಿನ ನಿಗದಿಪಡಿಸಲಾಗಿದೆ. ಫೆಬ್ರವರಿ 20 ರಂದು ದುಬೈಯಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಮೊದಲ ಪಂದ್ಯವನ್ನು ಆಡಲಿದೆ. ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈಯಲ್ಲೇ ಆಡಲಿದೆ. ಒಂದು ವೇಳೆ ಭಾರತ ಅರ್ಹತೆ ಪಡೆಯದಿದ್ದರೆ ಲಾಹೋರ್‍ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಒಟ್ಟು 8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಪಾಕಿಸ್ತಾನ, ಭಾರತ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳು ಸ್ಥಾನ ಪಡೆದರೆ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಬಿ ಗುಂಪಿನಲ್ಲಿ ಸ್ಥಾನ ಪಡೆದಿವೆ. ಭಾರತವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಫೆಬ್ರವರಿ 23 ರಂದು ದುಬೈಯಲ್ಲಿ ಎದುರಿಸಲಿದೆ. 8 ತಂಡಗಳ ಈ ಟೂರ್ನಿಯಲ್ಲಿ 15 ಲೀಗ್ ಪಂದ್ಯಗಳು ನಡೆಯಲಿದ್ದು, ಒಟ್ಟು 19 ದಿನಗಳ ಕಾಲ ಟೂರ್ನಿ ಸಾಗಿ ಬರಲಿದೆ ಎಂದು ಐಸಿಸಿ ತಿಳಿಸಿದೆ.
ಈ ಟೂರ್ನಿಯ ಪಂದ್ಯಗಳು ಪಾಕಿಸ್ತಾನದ ರಾವಲ್ಪಿಂಡಿ, ಲಾಹೋರ್ ಮತ್ತು ಕರಾಚಿಯಲ್ಲಿ ನಡೆಯಲಿವೆ. ಪಾಕಿಸ್ತಾನದ ಪ್ರತಿ ಕ್ರೀಡಾಂಗಣದಲ್ಲಿ ಮೂರು ಗುಂಪು ಪಂದ್ಯಗಳು ನಡೆಯಲಿವೆ. ಲಾಹೋರ್ ಎರಡನೇ ಸೆಮಿಫೈನಲ್‍ಗೆ ಆತಿಥ್ಯ ವಹಿಸಲಿದ್ದು, ಮೊದಲ ಸೆಮಿಫೈನಲ್ ದುಬೈಯಲ್ಲಿ ನಡೆಯಲಿದೆ. ಭಾರತ ಅರ್ಹತೆ ಪಡೆಯದಿದ್ದರೆ ಮಾರ್ಚ್ 9 ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೂ ಲಾಹೋರ್ ಆತಿಥ್ಯ ವಹಿಸಲಿದೆ. ಭಾರತ ಫೈನಲ್ ತಲುಪಿದರೆ ಈ ಪಂದ್ಯ ದುಬೈಯಲ್ಲಿ ನಡೆಯಲಿದೆ. ಸೆಮಿಫೈನಲ್ ಮತ್ತು ಫೈನಲ್ ಎರಡರಲ್ಲೂ ಮೀಸಲು ದಿನಗಳನ್ನು ಒಳಗೊಂಡಿದೆ. ಮೊದಲ ಸೆಮಿಫೈನಲ್ ಪಂದ್ಯ ದುಬೈಯಲ್ಲಿ ನಡೆಯಲಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಯುಎಇಯ ಹಿರಿಯ ಸಚಿವ ಮತ್ತು ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮುಖ್ಯಸ್ಥ ಶೇಖ್ ನಹ್ಯಾನ್ ಅಲ್ ಮುಬಾರಕ್ ಅವರನ್ನು ಪಾಕಿಸ್ತಾನದಲ್ಲಿ ಭೇಟಿಯಾದ ನಂತರ ಭಾರತದ ಪಂದ್ಯಗಳನ್ನು ಯುಎಇಯಲ್ಲಿ ನಡೆಸುವ ಬಗ್ಗೆ ನಿರ್ಧರಿಸಲಾಗಿದೆ. ಪಿಸಿಬಿ ಯುಎಇಯನ್ನು ಚಾಂಪಿಯನ್ಸ್ ಟ್ರೋಫಿಗೆ ತಟಸ್ಥ ಸ್ಥಳವಾಗಿ ಆಯ್ಕೆ ಮಾಡಿದೆ ಎಂದು ಪಿಸಿಬಿ ವಕ್ತಾರ ಅಮೀರ್ ಮಿರ್ ಸಭೆಯ ನಂತರ ತಿಳಿಸಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಪೂರ್ಣ ವೇಳಾಪಟ್ಟಿ
ಫೆಬ್ರವರಿ 19 - ಪಾಕಿಸ್ತಾನ-ನ್ಯೂಜಿಲೆಂಡ್ - ಕರಾಚಿ, ಪಾಕಿಸ್ತಾನ.
ಫೆಬ್ರವರಿ 20 - ಬಾಂಗ್ಲಾದೇಶ-ಭಾರತ - ದುಬೈ.
ಫೆಬ್ರವರಿ 21 - ಅಫ್ಘಾನಿಸ್ತಾನ-ದಕ್ಷಿಣ ಆಫ್ರಿಕಾ - ಕರಾಚಿ, ಪಾಕಿಸ್ತಾನ.
ಫೆಬ್ರವರಿ 22 - ಆಸ್ಟ್ರೇಲಿಯಾ-ಇಂಗ್ಲೆಂಡ್ - ಲಾಹೋರ್, ಪಾಕಿಸ್ತಾನ.
ಫೆಬ್ರವರಿ 23 - ಪಾಕಿಸ್ತಾನ-ಭಾರತ - ದುಬೈ.
ಫೆಬ್ರವರಿ 24 - ಬಾಂಗ್ಲಾದೇಶ-ನ್ಯೂಜಿಲೆಂಡ್ - ರಾವಲ್ಪಿಂಡಿ, ಪಾಕಿಸ್ತಾನ.
ಫೆಬ್ರವರಿ 25 - ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ, ರಾವಲ್ಪಿಂಡಿ - ಪಾಕಿಸ್ತಾನ.
ಫೆಬ್ರವರಿ 26 - ಅಫ್ಘಾನಿಸ್ತಾನ-ಇಂಗ್ಲೆಂಡ್ - ಲಾಹೋರ್, ಪಾಕಿಸ್ತಾನ.
ಫೆಬ್ರವರಿ 27 - ಪಾಕಿಸ್ತಾನ-ಬಾಂಗ್ಲಾದೇಶ - ರಾವಲ್ಪಿಂಡಿ, ಪಾಕಿಸ್ತಾನ.
ಫೆಬ್ರವರಿ 28 - ಅಫ್ಘಾನಿಸ್ತಾನ-ಆಸ್ಟ್ರೇಲಿಯಾ - ಲಾಹೋರ್, ಪಾಕಿಸ್ತಾನ.
ಮಾರ್ಚ್ 01 - ದಕ್ಷಿಣ ಆಫ್ರಿಕಾ-ಇಂಗ್ಲೆಂಡ್ - ಕರಾಚಿ, ಪಾಕಿಸ್ತಾನ.
ಮಾರ್ಚ್ 02 - ನ್ಯೂಜಿಲೆಂಡ್-ಭಾರತ - ದುಬೈ.
ಮಾರ್ಚ್ 04 - ಸೆಮಿಫೈನಲ್ 1 - ದುಬೈ.
ಮಾರ್ಚ್ 05 - ಸೆಮಿಫೈನಲ್ 2 - ಲಾಹೋರ್, ಪಾಕಿಸ್ತಾನ.
ಮಾರ್ಚ್ 9 - ಫೈನಲ್ - ಲಾಹೋರ್, ಪಾಕಿಸ್ತಾನ.
0 comments:
Post a Comment