ಪುತ್ತೂರು, ಡಿಸೆಂಬರ್ 07, 2024 (ಕರಾವಳಿ ಟೈಮ್ಸ್) : ತಾಲೂಕಿನ ಬಲ್ನಾಡು ಗ್ರಾಮದ ಬುಲೇರಿಕಟ್ಟೆ ಸಮೀಪದ ಸಾಜರೋಡ್-ಮಾಪಲೆಕೊಚ್ಚಿ ಎಂಬಲ್ಲಿ ನವೆಂಬರ್ 19 ರಂದು ನಡೆದ ಮೊಬೈಲ್ ಟವರ್ ಬ್ಯಾಟರಿಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಕಾರ್ಯಾಚರಣೆ ನಡೆಸಿದ ಪೊಲೀಸರು ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳ ಸಹಿತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ನಿವಾಸಿ ಹರೀಶ್ ನಾಯ್ಕ (30) ಎಂದು ಹೆಸರಿಸಲಾಗಿದೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ರವಿ ಬಿ ಎಸ್ ಅವರ ನೇತೃತ್ವದ ತನಿಖಾ ತಂಡ ಈ ಕಾರ್ಯಾಚರಣೆ ನಡೆಸಿದೆ. ಆರೋಪಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ಪ್ರಕರಣದಲ್ಲಿ ಕಳವಾದ ಬ್ಯಾಟರಿಗಳನ್ನು ಕಳವು ಮಾಡಿದ ಬಗ್ಗೆ ತಪೆÇ್ಪಪ್ಪಿಕೊಂಡಿರುತ್ತಾನೆ. ಆರೋಪಿ ಕೊಣಾಜೆ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಬ್ಯಾಟರಿ ಸೆಲ್ ಗಳ ಕಳವು ಮಾಡಿರುವುದು ತನಿಖೆಯಲ್ಲಿ ಪೊಲೀಸರು ಕಂಡುಕೊಂಡಿದ್ದಾರೆ.
ಬಂಧಿತ ಆರೋಪಿಯಿಂದ 48 ಲಕ್ಷ ರೂಪಾಯಿ ಮೌಲ್ಯದ 24 ಬ್ಯಾಟರಿ ಸೆಲ್ ಗಳನ್ನು, ಕಳವು ಮಾಡಲು ಬಳಸಿದ 2.5 ಲಕ್ಷ ರೂಪಾಯಿ ಮೌಲ್ಯದ ಕೆಎ 19 ಎಂಬಿ 2226 ನೋಂದಣಿ ಸಂಖ್ಯೆಯ ಕಾರು ಮತ್ತು 2 ಮೊಬೈಲ್ ಫೋನುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಯತೀಶ್ ಎನ್ ಹಾಗೂ ಅಡಿಶನಲ್ ಎಸ್ಪಿ ರಾಜೇಂದ್ರ ಡಿ ಎಸ್ ಅವರ ನಿರ್ದೇಶನದಲ್ಲಿ, ಪುತ್ತೂರು ಡಿವೈಎಸ್ಪಿ ಅರುಣ್ ನಾಗೇಗೌಡ ಅವರ ಮಾರ್ಗದರ್ಶನದಲ್ಲಿ, ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಪೊಲೀಸ್ ಇನ್ಸ್ ಪೆಕ್ಟರ್ ರವಿ ಬಿ ಎಸ್ ಅವರ ನೇತೃತ್ವದಲ್ಲಿ ಪುತ್ತೂರು ಗ್ರಾಮಾಂತರ ಠಾಣಾ ಪಿಎಸ್ಸೈಗಳಾದ ಜಂಬುರಾಜ್ ಬಿ ಮಹಾಜನ್, ಸುಷ್ಮಾ ಜಿ ಭಂಡಾರಿ, ಎಎಸ್‍ಐ ಮುರುಗೇಶ್ ಬಿ, ಎಚ್ ಸಿ ಗಳಾದ ಪ್ರವೀಣ್ ಎನ್, ಹರೀಶ್ ಜಿ ಎನ್, ಶರೀಫ್ ಸಾಬ್, ಪಿಸಿಗಳಾದ ಚಂದ್ರಶೇಖರ, ಶರಣಪ್ಪ ಪಾಟೀಲ್, ನಾಗೇಶ್ ಕೆ ಸಿ, ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್ ಮತ್ತು ಸಂಪತ್ ಅವರ ತಂಡ ಕಾರ್ಯನಿರ್ವಹಿಸಿ ಈ ಕಾರ್ಯಾಚರಣೆ ನಡೆಸಿದೆ.
0 comments:
Post a Comment