ಪಾಣೆಮಂಗಳೂರು : ಅಂಗನವಾಡಿ ಶಿಕ್ಷಕಿ ದಿವಂಗತ ಪ್ರೇಮಾ ಟೀಚರ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ, ನುಡಿನಮನ ಕಾರ್ಯಕ್ರಮ - Karavali Times ಪಾಣೆಮಂಗಳೂರು : ಅಂಗನವಾಡಿ ಶಿಕ್ಷಕಿ ದಿವಂಗತ ಪ್ರೇಮಾ ಟೀಚರ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ, ನುಡಿನಮನ ಕಾರ್ಯಕ್ರಮ - Karavali Times

728x90

10 December 2024

ಪಾಣೆಮಂಗಳೂರು : ಅಂಗನವಾಡಿ ಶಿಕ್ಷಕಿ ದಿವಂಗತ ಪ್ರೇಮಾ ಟೀಚರ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ, ನುಡಿನಮನ ಕಾರ್ಯಕ್ರಮ

ಅಗಲಿದ ಶಿಕ್ಷಕಿ ಪ್ರೇಮಾ

ಬಂಟ್ವಾಳ, ಡಿಸೆಂಬರ್ 10, 2024 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ಅಂಗನವಾಡಿ ಕೇಂದ್ರದ ಶಿಕ್ಷಕಿ, ಇಲ್ಲಿನ ಉಪ್ಪುಗುಡ್ಡೆ ನಿವಾಸಿ ಶ್ರೀಮತಿ ಪ್ರೇಮಾ ಟೀಚರ್ (52) ಅವರು ಹಠಾತ್ ಅನಾರೋಗ್ಯದಿಂದ ನಿಧನ ಹೊಂದಿ ಡಿಸೆಂಬರ್ 10 ರಂದು ಒಂದು ವರ್ಷವಾಗುತ್ತಿರುವ ಹಿನ್ನಲೆಯಲ್ಲಿ ಪ್ರಥಮ ವರ್ಷದ ಪುಣ್ಯ ಸ್ಮರಣೆ ಹಾಗೂ ನುಡಿ ನಮನ ಕಾರ್ಯಕ್ರಮವು ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ನಡೆಯಿತು. 

ಅಂಗನವಾಡಿ ಕೇಂದ್ರದ ನೂತನ ಶಿಕ್ಷಕಿ ಶ್ರೀಮತಿ ದೀಪ್ತಿ ಎನ್ ಅವರು ಅಗಲಿದ ಶಿಕ್ಷಕಿ ಪ್ರೇಮಾ ಅವರ ಬಗ್ಗೆ ಸ್ಮರಣಾ ಭಾಷಣಗೈದರು. ಸ್ಥಳೀಯ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಪತ್ರಕರ್ತ ಪಿ ಎಂ ಅಶ್ರಫ್ ಪಾಣೆಮಂಗಳೂರು, ಗುಡ್ಡೆಅಂಗಡಿ ಅಂಗನವಾಡಿ ಶಿಕ್ಷಕಿ ವಿನ್ನಿಫ್ರೆಡ್ ಅವರು ನುಡಿನಮನ ಸಲ್ಲಿಸಿದರು. 

ಇದೇ ಮಂಗಳವಾರ ಬೆಳಗ್ಗಿನ ಜಾವ ನಿಧನ ಹೊಂದಿದ ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರಿಗೂ ಮೌನ ಪ್ರಾರ್ಥನೆ ಸಲ್ಲಿಸುವ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು. 

ಬಾಲವಿಕಾಸ ಸಮಿತಿ ಸದಸ್ಯೆ ಶ್ರೀಮತಿ ಗಾಯತ್ರಿ ಭಟ್, ಆಶಾ ಕಾರ್ಯಕರ್ತೆ ಶ್ರೀಮತಿ ಜ್ಯೋತಿ ಲಕ್ಷ್ಮಿ, ಬಂಗ್ಲೆಗುಡ್ಡೆ ಅಂಗನವಾಡಿ ಕೇಂದ್ರದ ಸಹಾಯಕಿ ಜ್ಯೋತಿ, ರೆಂಗೇಲು, ಉಪ್ಪುಗುಡ್ಡೆ, ಜೈನರಪೇಟೆ, ಬೊಂಡಾಲ ಹಾಗೂ ಗುಡ್ಡೆಅಂಗಡಿ ಅಂಗನವಾಡಿ ಶಿಕ್ಷಕಿಯರಾದ ಬಬಿತ, ಹರಿಣಾಕ್ಷಿ, ಶಶಿಕಲಾ, ವೀಣಾ ಹಾಗೂ ವಿನ್ನಿಫ್ರೆಡ್, ಪ್ರಮುಖರಾದ ಇಕ್ಬಾಲ್ ಬಂಗ್ಲೆಗುಡ್ಡೆ, ಅಬ್ದುಲ್ ಖಾದರ್ ಪಿ ಬಿ ಎಚ್,  ಅಬ್ದುಲ್ ಮಜೀದ್ ಮೊದಲಾದವರು ಭಾಗವಹಿಸಿದ್ದರು. 

2023 ರ ಡಿಸೆಂಬರ್ 9 ರಂದು ಶನಿವಾರ ಮಧ್ಯರಾತ್ರಿ ಬಳಿಕ ಶ್ರೀಮತಿ ಪ್ರೇಮಾ ಟೀಚರ್ ಅವರಿಗೆ  ಹಠಾತ್ ಆಗಿ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ತಕ್ಷಣ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾದೆ ಅವರು ಮೃತಪಟ್ಟಿದ್ದರು. ಡಿಸೆಂಬರ್ 10 ರಂದು ಭಾನುವಾರ ಮಧ್ಯಾಹ್ನದ ವೇಳೆಗೆ ಅವರ ಅಂತ್ಯ ಕ್ರಿಯೆ ನೆರವೇರಿಸಲಾಗಿತ್ತು. 

  • Blogger Comments
  • Facebook Comments

0 comments:

Post a Comment

Item Reviewed: ಪಾಣೆಮಂಗಳೂರು : ಅಂಗನವಾಡಿ ಶಿಕ್ಷಕಿ ದಿವಂಗತ ಪ್ರೇಮಾ ಟೀಚರ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ, ನುಡಿನಮನ ಕಾರ್ಯಕ್ರಮ Rating: 5 Reviewed By: karavali Times
Scroll to Top