ಬಂಟ್ವಾಳ, ಜನವರಿ 01, 2025 (ಕರಾವಳಿ ಟೈಮ್ಸ್) : ಫರಂಗಿಪೇಟೆ ಸಮೀಪದ ಅರ್ಕುಳ ದ್ವಾರದ ಬಳಿ ಮಂಗಳವಾರ ಸಂಜೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ವಿಟ್ಲ ಪ್ರಥಮ ದರ್ಜೆ ಕಾಲೇಜಿನ ಎಂ ಎಸ್ ಡಬ್ಲ್ಯು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ, ಯುವ ಯಕ್ಷಗಾನ ಕಲಾವಿದ ಪ್ರವೀತ್ ಕುಮಾರ್ (21) ಅವರು ದಾರುಣವಾಗಿ ಮೃತಪಟ್ಟಿದ್ದಾರೆ.
ವಿಟ್ಲ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದರೂ ಯಕ್ಷಗಾನ ಕಲಾವಿದನಾಗಿ, ಯಕ್ಷಗಾನ ಕಥೆಗಳಲ್ಲಿ ಸ್ತ್ರೀ ಪಾತ್ರಧಾರಿಯಾಗಿದ್ದ ಪ್ರವೀತ್ ಮಂಗಳವಾರ ಸಂಜೆ ಬಜಪೆ ಕಂದಾವರ ಬೈಲಿನಲ್ಲಿ ನಿಗದಿಯಾಗಿದ್ದ ಮೇಳದ ಯಕ್ಷಗಾನಕ್ಕೆ ತೆರಳುತ್ತಿದ್ದ ವೇಳೆ ಅರ್ಕುಳ ಜಂಕ್ಷನ್ ಬಳಿ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದಾರೆ. ಅದೇ ವೇಳೆ ಹೆದ್ದಾರಿಯಲ್ಲಿ ಸಾಗಿ ಬಂದ ಐಸ್ ಕ್ರೀಂ ಸಾಗಾಟದ ಟೆಂಪೋ ಪ್ರವೀತ್ ತಲೆಯ ಮೇಲೆ ಹರಿದು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಮುಸ್ಲಿಂ ಯುವಕರು ಪ್ರವೀತ್ ಮೃತದೇಹವನ್ನು ರಸ್ತೆಯಿಂದ ಮೇಲೆತ್ತಿ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. ಈ ಬಗ್ಗೆ ಮಂಗಳೂರು ನಗರ ಸಂಚಾರಿ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment