ಎಲ್ಲ ವರ್ಗದ ಜನರ ಏಳಿಗೆಗೆ ಪೂರಕವಾಗಿ ಸಂವಿಧಾನ ರಚನೆ ಮಾಡುವಲ್ಲಿ ಅಂಬೇಡ್ಕರ್ ಪಾತ್ರ ಮಹತ್ವದ್ದು : ರಮಾನಾಥ ರೈ ಬಣ್ಣನೆ - Karavali Times ಎಲ್ಲ ವರ್ಗದ ಜನರ ಏಳಿಗೆಗೆ ಪೂರಕವಾಗಿ ಸಂವಿಧಾನ ರಚನೆ ಮಾಡುವಲ್ಲಿ ಅಂಬೇಡ್ಕರ್ ಪಾತ್ರ ಮಹತ್ವದ್ದು : ರಮಾನಾಥ ರೈ ಬಣ್ಣನೆ - Karavali Times

728x90

6 December 2024

ಎಲ್ಲ ವರ್ಗದ ಜನರ ಏಳಿಗೆಗೆ ಪೂರಕವಾಗಿ ಸಂವಿಧಾನ ರಚನೆ ಮಾಡುವಲ್ಲಿ ಅಂಬೇಡ್ಕರ್ ಪಾತ್ರ ಮಹತ್ವದ್ದು : ರಮಾನಾಥ ರೈ ಬಣ್ಣನೆ

ಮಂಗಳೂರು, ಡಿಸೆಂಬರ್ 06, 2024 (ಕರಾವಳಿ ಟೈಮ್ಸ್) : ಸಂವಿಧಾನದ ಬದಲಾವಣೆ ದೇಶಕ್ಕೆ ಅಪಾಯ. ಬಿಜೆಪಿಗರು ಸಂವಿಧಾನ ಬದಲಾವಣೆ ಹೇಳಿಕೆ ನೀಡುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದರು. 

ಡಾ ಬಿ ಆರ್ ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ದಿನದ ಪ್ರಯುಕ್ತ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚಣೆಗೈದು ಮಾತನಾಡಿದ ಅವರು, ಸಮಾಜದ ಎಲ್ಲಾ ವರ್ಗದ ಜನರ ಏಳಿಗೆಗೆ ಅನುಕೂಲವಾಗುವ ರೀತಿ ಸಂವಿಧಾನದ ರಚನೆ ಮಾಡುವಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಹತ್ವದ ಪಾತ್ರವಹಿಸಿದ್ದಾರೆ. ಅವರು ಶೋಷಿತ ಸಮಾಜದ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯದಂತಹ ಸಾಮಾಜಿಕ ಅನಿಷ್ಠಗಳ ವಿರುದ್ಧ ದಲಿತರ ಹಕ್ಕುಗಳಿಗಾಗಿ ಹೋರಾಡಿದರು ಎಂದವರು ಸ್ಮರಿಸಿದರು. 

ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಕಡೆಗಣಿಸಿದೆ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಬಿಜೆಪಿ ನೂರು ಭಾರಿ ಹೇಳಿದ ಸುಳ್ಳನ್ನು ಜನರು ನಂಬುತ್ತಿದ್ದಾರೆ. ಇಂದು ಸಂವಿಧಾನದ ರಕ್ಷಣೆಗೆ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿರುವುದು ಈ ದೇಶದ ದುರಂತ. ಮತೀಯವಾದಿ ಆಡಳಿತರೂಢ ಬಿಜೆಪಿ ಪಕ್ಷ ಅಧಿಕಾರ ಪಡೆದು ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳಿಗೆ ಪ್ರತ್ಯಕ್ಷ-ಪರೋಕ್ಷವಾಗಿ ಅನ್ಯಾಯ ಮಾಡುತ್ತಿದೆ ಎಂದು ರಮಾನಾಥ ರೈ ಆರೋಪಿಸಿದರು.

ಸಾಮಾಜಿಕ ನ್ಯಾಯದಿಂದ ವಂಚಿತರಾದ ಜನರಿಗೆ ಸಾಮಾಜಿಕ ನ್ಯಾಯ ಕೊಡುವಲ್ಲಿ ಸಂವಿಧಾನ ನಮಗೆ ರಕ್ಷಣೆಯಾಗಿ ನಿಂತಿದೆ. ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಟೊಂಕ ಕಟ್ಟಿ ನಿಂತಿದ್ದು, ಇದಕ್ಕೆ ರಾಹುಲ್ ಗಾಂಧಿ ಅವರು ನಾಯಕತ್ವ ನೀಡುತ್ತಿದ್ದಾರೆ. ಸಂವಿಧಾನದ ರಕ್ಷಣೆ ಮಾಡುವ ಹೊಣೆಗಾರಿಕೆ ದೇಶದ ಜನರ ಮೇಲಿದೆ ಎಂದು ರೈ ಹೇಳಿದರು. 

ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ, ಡಿಸಿಸಿ ಉಪಾಧ್ಯಕ್ಷ ಅಬ್ದುಲ್ ರವೂಫ್, ಟಿ ಹೊನ್ನಯ್ಯ, ಕೆಪಿಸಿಸಿ ಸದಸ್ಯೆ ಕೆ ಅಪ್ಪಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ದಿನೇಶ್ ಮೂಳೂರು, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಪ್ರಮುಖರಾದ ಮಲಾರ್ ಮೋನು, ಹಯಾತುಲ್ ಖಾಮಿಲ್, ಶಬೀರ್ ಸಿದ್ದಕಟ್ಟೆ, ಇಸ್ಮಾಯಿಲ್ ತಲಪಾಡಿ, ಸತೀಶ್ ಪೆಂಗಾಲ್, ಸಬಿತಾ ಮಿಸ್ಕಿತ್, ಪ್ರೇಮ್ ಬಳ್ಳಾಲ್ ಭಾಗ್, ದಿನೇಶ್ ಕೋಡಿಯಾಲ್ ಬೈಲ್, ರಮಾನಂದ ಪೂಜಾರಿ, ಮೋಹನ್ ಚೆಂಡ್ತಿಮಾರ್, ಸಲೀಂ ಪಾಂಡೇಶ್ವರ, ಜಾರ್ಜ್, ದುರ್ಗಾ ಪ್ರಸಾದ್, ಸೌಹಾನ್ ಎಸ್ ಕೆ, ರವಿ ಉರ್ವಸ್ಟೋರ್, ಕಿರಣ್ ಕುಮಾರ್, ಗಣೇಶ್ ಮೂಡಬಿದ್ರೆ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಎಲ್ಲ ವರ್ಗದ ಜನರ ಏಳಿಗೆಗೆ ಪೂರಕವಾಗಿ ಸಂವಿಧಾನ ರಚನೆ ಮಾಡುವಲ್ಲಿ ಅಂಬೇಡ್ಕರ್ ಪಾತ್ರ ಮಹತ್ವದ್ದು : ರಮಾನಾಥ ರೈ ಬಣ್ಣನೆ Rating: 5 Reviewed By: karavali Times
Scroll to Top