ಅಂಚೆ ಇಲಾಖೆಯಿಂದ ರಾಷ್ಟ್ರೀಯ ಮಟ್ಟದಲ್ಲಿ “ಢಾಯೀ ಅಖರ್” ಪತ್ರ ಬರವಣಿಗೆ ಸ್ಪರ್ಧೆ - Karavali Times ಅಂಚೆ ಇಲಾಖೆಯಿಂದ ರಾಷ್ಟ್ರೀಯ ಮಟ್ಟದಲ್ಲಿ “ಢಾಯೀ ಅಖರ್” ಪತ್ರ ಬರವಣಿಗೆ ಸ್ಪರ್ಧೆ - Karavali Times

728x90

13 November 2024

ಅಂಚೆ ಇಲಾಖೆಯಿಂದ ರಾಷ್ಟ್ರೀಯ ಮಟ್ಟದಲ್ಲಿ “ಢಾಯೀ ಅಖರ್” ಪತ್ರ ಬರವಣಿಗೆ ಸ್ಪರ್ಧೆ

ಪುತ್ತೂರು, ನವೆಂಬರ್ 14, 2024 (ಕರಾವಳಿ ಟೈಮ್ಸ್) : 2024-25ನೇ ವಿತ್ತೀಯ ವರ್ಷದಲ್ಲಿ ರಾಷ್ಟ್ರೀಯ ಮಟ್ಟದ ಢಾಯೀ ಅಖರ್ ಪತ್ರ ಬರವಣಿಗೆ ಸ್ಪರ್ಧೆಯ ಅಂಗವಾಗಿ ಕರ್ನಾಟಕ ಅಂಚೆ ವೃತ್ತವು ರಾಜ್ಯದ ಜನತೆಯನ್ನು ಸ್ಪರ್ಧೆಯಲ್ಲಿ ಭಾಗವಹಿಸಲು ಆಹ್ವಾನಿಸುತ್ತಿದೆ. ಈ ಸಂದರ್ಭದಲ್ಲಿ ಪುತ್ತೂರು ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳು ವಿದ್ಯಾರ್ಥಿಗಳನ್ನು ಹಾಗೂ ಪುತ್ತೂರು ಅಂಚೆ ವಿಭಾಗದ ಎಲ್ಲಾ ನಾಗರಿಕರು ಈ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆ. 

ಪತ್ರ ಬರವಣಿಗೆ ಸ್ಪರ್ಧೆಯ ವಿಷಯ “ಆಧುನಿಕ ಕಾಲದಲ್ಲಿ ಪತ್ರಗಳ ಪ್ರಾಮುಖ್ಯತೆ” ಆಗಿದ್ದು, ಕನ್ನಡ/ ಹಿಂದಿ/ ಇಂಗ್ಲಿಷ್ ಭಾಷೆಯಲ್ಲಿ ಬರೆಯಬಹುದು. ಸ್ಪರ್ಧೆಗಳು 18 ವರ್ಷ ಒಳಗಿನವರು ಮತ್ತು 18 ವರ್ಷ ಮೇಲ್ಪಟ್ಟವರು ವಿಭಾಗದಲ್ಲಿರುವುದು, ಇನ್ ಲ್ಯಾಂಡ್ ಲೆಟರ್ ಕಾಡಿನಲ್ಲಿ ಪತ್ರ ಬರೆಯುವುದು ಮತ್ತು ಎ-4 ಹಾಳೆಯಲ್ಲಿ ಪತ್ರ ಬರೆದು ಅಂಚೆ ಲಕೋಟೆಯಲ್ಲಿ ರವಾನಿಸುವುದು., ದೇಶೀಯ ಪತ್ರ ಕಾರ್ಡ್ ನಲ್ಲಿ 500 ಶಬ್ದಗಳು ಮೀರಿರಬಾರದು ಹಾಗೂ ಎ-4 ಹಾಳೆಯಲ್ಲಿ 1000 ಶಬ್ದಗಳನ್ನು ಮೀರಿರಬಾರದು. ಕೈ ಬರಹದ ಪತ್ರಗಳಿಗೆ ಮಾತ್ರ ಅವಕಾಶ., ಸ್ಪರ್ಧಾಳುಗಳು ತಮ್ಮ ಲೇಖನದ ಮೇಲ್ಗಡೆ “18 ವರ್ಷದ ಮೇಲಿನವರು ಹಾಗೂ 18 ವರ್ಷದ ಕೆಳಗಿನವರು” ಎಂಬ ಮಾಹಿತಿಯನ್ನು ಸ್ಪಷ್ಟವಾಗಿ ಬರೆದಿರಬೇಕು., ಸ್ಪರ್ಧಾಳುಗಳು ತಮ್ಮ ಪತ್ರದಲ್ಲಿ ತಮ್ಮ ವಯಸ್ಸಿನ ಬಗ್ಗೆ “I Certify that I am below / above 18 years of age” ಎಂಬ ಸ್ವದೃಢೀಕರಣವನ್ನು ನೀಡಬೇಕು., ಪತ್ರಗಳನ್ನು “ಹಿರಿಯ ಅಂಚೆ ಅಧೀಕ್ಷಕರು, ಪುತ್ತೂರು ಅಂಚೆ ವಿಭಾಗ, ಪುತ್ತೂರು-574 201” ವಿಳಾಸಕ್ಕೆ ಡಿಸೆಂಬರ್ 14ರೊಳಗೆ ತಲುಪಿಸಬೇಕು. 

ಆಯ್ಕೆಯಾದ ಬರಹಗಳಿಗೆ ಪ್ರತಿ ವಿಭಾಗದ ಅತ್ಯುತ್ತಮ ಮೂರು ಕೃತಿಗಳಿಗೆ ಬಹುಮಾನ ನೀಡಲಾಗುತ್ತಿದ್ದು,  ದೇಶೀಯ ಮಟ್ಟದಲ್ಲಿ ಕ್ರಮವಾಗಿ 50 ಸಾವಿರ ರೂಪಾಯಿ, 25 ಸಾವಿರ ರೂಪಾಯಿ ಹಾಗೂ 10 ಸಾವಿರ ರೂಪಾಯಿ ಮತ್ತು ಕರ್ನಾಟಕ ವೃತ್ತ ಮಟ್ಟದಲ್ಲಿ ಕ್ರಮವಾಗಿ 25 ಸಾವಿರ ರೂಪಾಯಿ, 10 ಸಾವಿರ ರೂಪಾಯಿ ಹಾಗೂ 5 ಸಾವಿರ ರೂಪಾಯಿ ಮೊತ್ತವನ್ನು ವಿತರಿಸಲಾಗುವುದು. 

ಭಾರತೀಯ ಅಂಚೆ ಇಲಾಖೆಯ ವತಿಯಿಂದ ನಡೆಯುವ ಈ ಪತ್ರ ಲೇಖನ ಸ್ಪರ್ಧೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಹಾಗೂ ಬಹುಮಾನಗಳನ್ನು ಗೆಲ್ಲುವಂತೆ ಅಂಚೆ ಇಲಾಖೆಯ ಪುತ್ತೂರು ಉಪವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅಂಚೆ ಇಲಾಖೆಯಿಂದ ರಾಷ್ಟ್ರೀಯ ಮಟ್ಟದಲ್ಲಿ “ಢಾಯೀ ಅಖರ್” ಪತ್ರ ಬರವಣಿಗೆ ಸ್ಪರ್ಧೆ Rating: 5 Reviewed By: karavali Times
Scroll to Top