ಬಂಟ್ವಾಳದಲ್ಲಿ ಎಐಸಿಸಿಟಿಯು ಪ್ರಥಮ ಕರ್ನಾಟಕ ರಾಜ್ಯ ಸಮ್ಮೇಳನ ಯಶಸ್ವಿ ಮುಕ್ತಾಯ - Karavali Times ಬಂಟ್ವಾಳದಲ್ಲಿ ಎಐಸಿಸಿಟಿಯು ಪ್ರಥಮ ಕರ್ನಾಟಕ ರಾಜ್ಯ ಸಮ್ಮೇಳನ ಯಶಸ್ವಿ ಮುಕ್ತಾಯ - Karavali Times

728x90

26 November 2024

ಬಂಟ್ವಾಳದಲ್ಲಿ ಎಐಸಿಸಿಟಿಯು ಪ್ರಥಮ ಕರ್ನಾಟಕ ರಾಜ್ಯ ಸಮ್ಮೇಳನ ಯಶಸ್ವಿ ಮುಕ್ತಾಯ

29 ಸದಸ್ಯರ ರಾಜ್ಯ ಸಮಿತಿ ರಚನೆ :  ಕಾಮ್ರೆಡ್ ಪಿ.ಪಿ. ಅಪ್ಪಣ್ಣ ಅಧ್ಯಕ್ಷ ಕಾಮ್ರೆಡ್ ಮೈತ್ರೇಯಿ ಕಾರ್ಯದರ್ಶಿ 


ಬಂಟ್ವಾಳ, ನವೆಂಬರ್ 26, 2024 (ಕರಾವಳಿ ಟೈಮ್ಸ್) : ಎರಡು ದಿನದ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್  (ಎಐಸಿಸಿಟಿಯು) ಕರ್ನಾಟಕ ರಾಜ್ಯ ಸಮ್ಮೇಳನವು ಯಶಸ್ವಿಯಾಗಿ ಜರುಗಿದ್ದು, 29 ಮಂದಿ ಸದಸ್ಯರ ರಾಜ್ಯ ಸಮಿತಿಯನ್ನು ಇದೇ ವೇಳೆ ಪ್ರತಿನಿಧಿಗಳು ಚುನಾಯಿಸಿದರು. ಕಾಮ್ರೆಡ್ ಪಿ ಪಿ ಅಪ್ಪಣ್ಣ ಅವರನ್ನು ಅಧ್ಯಕ್ಷರಾಗಿ ಹಾಗೂ ಕಾಮ್ರೆಡ್ ಮೈತ್ರೇಯಿ ಅವರನ್ನು ರಾಜ್ಯ ಕಾರ್ಯದರ್ಶಿಯಾಗಿ ಕರ್ನಾಟಕದಲ್ಲಿ ಎಐಸಿಸಿಟಿಯು ಒಂದು ಕ್ರಾಂತಿಕಾರಿ ಕಾರ್ಮಿಕರ ಸಂಘವಾಗಿ ಬೆಳೆಯಲು ಮುಂದಾಳತ್ವವನ್ನು ವಹಿಸುತ್ತಾರೆ.

ಎರಡನೇ ದಿನದಂದು ಸಂಘಟನೆಯ ದಸ್ತಾವೇಜಿನ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದ್ದು, ಸುಮಾರು 40 ಪ್ರತಿನಿಧಿಗಳು ತಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನು ಪ್ರತಿನಿಧಿ ಅಧಿವೇಶನದಲ್ಲಿ ಮುಂದಿಟ್ಟರು. ಸಂಘಟನೆಯ ದಸ್ತಾವೇಜನ್ನು ಅಧಿವೇಶನದಲ್ಲಿ ಮಂಡಿಸಿ, ಅನುಮೋದಿಸಲಾಯಿತು. ಕ್ರಾಂತಿಕಾರಿ ಕಾರ್ಮಿಕರ ಸಂಘಟನೆಯನ್ನು ಬೆಳೆಸಲು ಕಾರ್ಮಿಕರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವುದಲ್ಲದೆ, ತಮ್ಮ ಆರ್ಥಿಕ ಕಲ್ಯಾಣಕ್ಕಲ್ಲದೆ ವಸತಿ ಹಕ್ಕು, ಮಕ್ಕಳ ಶಿಕ್ಷಣ, ಅರೋಗ್ಯ ಭದ್ರತೆ, ಘನತೆಗಾಗಿ ನಾವು ಹೋರಾಟಗಳನ್ನು ರೂಪಿಸಬೇಕು ಎಂದು ರಾಷ್ಟ್ರೀಯ ಅಧ್ಯಕ್ಷ  ಕಾಮ್ರೆಡ್ ವಿ ಶಂಕರ್ ಹೇಳಿದರು. 

ಎಐಸಿಸಿಟಿಯು ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ರಾಜೀವ್ ಡಿಮ್ರಿ ಅವರು ಮಾತನಾಡಿ, ಕರ್ನಾಟಕದ ರಾಜಕೀಯ ಪರಿಸ್ಥಿತಿಯಲ್ಲಿ ನಾವು ಕಾರ್ಮಿಕರ ಮಧ್ಯೆ ಪರ್ಯಾಯವಾಗಿ ಬೆಳೆಯುವುದಲ್ಲದೆ, ವಿಸ್ತಾರವಾದ ಕೆಲಸಗಳನ್ನು ಪ್ರಾರಂಭಿಸಬೇಕು. ಫ್ಯಾಶಿಸಂ ವಿರುದ್ಧ ಸಂಘಟಿತರಾಗಲು ಮತ್ತು ಕಾಪೆರ್Çರೇಟ್ ಪರ ಸರ್ಕಾರಗಳ ನೀತಿಗಳ ವಿರುದ್ಧ ಹೆಚ್ಚೆಚ್ಚು ಕಾರ್ಮಿಕರನ್ನು ನಾವು ಸಂಘಟಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು. 

ಕೇಂದ್ರ ಸರ್ಕಾರ ಹೊರಡಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಲು, ಕರ್ನಾಟಕ ಸರ್ಕಾರವು ಕಾರ್ಮಿಕ ಕಾನೂನುಗಳಿಗೆ ತಂದಿರುವ ತಿದ್ದುಪಡಿಗಳನ್ನು ಹಿಂಪಡೆಯಲು, ಗುತ್ತಿಗೆ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು, ಎಲ್ಲಾ ಕಾರ್ಮಿಕರಿಗೂ ಉತ್ತಮವಾದ ಮತ್ತು ಘನತೆಯುಕ್ತ ಕೆಲಸದ ವಾತಾವರಣ ಕಲ್ಪಿಸಲು ಎಐಸಿಸಿಟಿಯು ಸಜ್ಜಾಗುತ್ತಿದೆ ಎಂಬ ಘೋಷಣೆಯೊಂದಿಗೆ ಪ್ರಥಮ ರಾಜ್ಯ ಸಮ್ಮೇಳನ ಮುಕ್ತಾಯ ಕಂಡಿತು. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಎಐಸಿಸಿಟಿಯು ಪ್ರಥಮ ಕರ್ನಾಟಕ ರಾಜ್ಯ ಸಮ್ಮೇಳನ ಯಶಸ್ವಿ ಮುಕ್ತಾಯ Rating: 5 Reviewed By: karavali Times
Scroll to Top