ಬಂಟ್ವಾಳ, ಅಕ್ಟೋಬರ್ 09, 2024 (ಕರಾವಳಿ ಟೈಮ್ಸ್) : ಜೀಪೊಂದು ಚಾಲಕನ ನಿಯಂತ್ರಣ ಮೀರಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಅಟೋ ರಿಕ್ಷಾಗಳು ಹಾಗೂ ದ್ವಿಚಕ್ರ ವಾಹನಗಳಿಗೆ ಸರಣಿಯಾಗಿ ಡಿಕ್ಕಿ ಹೊಡೆದು ಸ್ಥಳೀಯವಾಗಿ ಆತಂಕ ಸೃಷ್ಟಿಸಿದ ಘಟನೆ ಸಜಿಪನಡು ಜಂಕ್ಷನ್ ಬಳಿ ಬುಧವಾರ ಸಂಜೆ ಸಂಭವಿಸಿದೆ.
ಬೋಳಿಯಾರ್ ಕಡೆಯಿಂದ ಬಂದ ಜೀಪ್ ಸಜಿಪ ಜಂಕ್ಷನ್ನಿಗೆ ತಲುಪುವ ವೇಳೆ ಚಾಲಕನ ನಿಯಂತ್ರಣ ಮೀರಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಎರಡು ಅಟೋ ರಿಕ್ಷಾಗಳು ಹಾಗೂ ಅಲ್ಲೇ ಇದ್ದ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಆತಂಕ ಸೃಷ್ಟಿಸಿದೆ. ಅಟೋ ಚಾಲಕರು ರಸ್ತೆ ಬದಿ ನಿಲ್ಲಿಸಿ ತೆರಳಿದ್ದರಿಂದ ಸಂಭಾವ್ಯ ಅಪಾಯ ಸ್ವಲ್ಪದರಲ್ಲೇ ತಪ್ಪಿ ಹೋಗಿದೆ. ಅಲ್ಲದೆ ಅದೇ ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಪುಟ್ಟ ವಿದ್ಯಾರ್ಥಿಗಳು ಕೂಡಾ ಅಪಘಾತದ ಶಬ್ದ ಕೇಳಿ ಓಡಿ ತಪ್ಪಿಸಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.
ಸಜೀಪ ಕಡೆಯಿಂದ ಬೋಳಿಯಾರು ಭಾಗಕ್ಕೆ ಸಂಚರಿಸುತ್ತಿರುವ ಜೀಪ್
ReplyDelete