ಬಂಟ್ವಾಳ, ಅಕ್ಟೋಬರ್ 21, 2024 (ಕರಾವಳಿ ಟೈಮ್ಸ್) : ಯಕ್ಷಗಾನ ಪ್ರದರ್ಶನಕ್ಕೆಂದು ಬೆಂಗಳೂರಿಗೆ ತೆರಳಿದ್ದ ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ (67) ಅವರು ಸೋಮವಾರ (ಅ 21) ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದು, ಅವರ ಹಠಾತ್ ನಿಧನ ರಂಗಭೂಮಿಗೆ ತುಂಬಲಾರದ ನಷ್ಟವಾಗಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸ್ವತಃ ಕಲಾಪ್ರೇಮಿಯಾಗಿರುವ ಮಾಜಿ ಸಚಿವ ರೈ ಅವರು ಜಯರಾಮ ಆಚಾರ್ಯ ನಿಧನದಿಂದ ಯಕ್ಷಗಾನ ಕಲಾ ಕ್ಷೇತ್ರ ಓರ್ವ ಪ್ರಸಿದ್ದ ಹಾಗೂ ಅಪ್ರತಿಮ ಕಲಾವಿದನನ್ನು ಕಳೆದುಕೊಂಡಿದ್ದು, ಕಲಾ ಲೋಕ ತೀವ್ರ ನೊಂದುಕೊಂಡಿರುವುದಕ್ಕೆ ಆಚಾರ್ಯ ಅವರ ಕುಟುಂಬಿಕರು ಹಾಗೂ ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗುತ್ತೇನೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.
ಜಯರಾಮ ಆಚಾರ್ಯ ಅವರ ಹಠಾತ್ ಅಗಲಿಕೆಯ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ಆಘಾತವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಭಗವಂತ ದಯಪಾಲಿಸಲಿ ಎಂದು ರೈ ತಮ್ಮ ಸಂತಾಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.
0 comments:
Post a Comment