ಬೆಳ್ತಂಗಡಿ, ಅಕ್ಟೋಬರ್ 15, 2024 (ಕರಾವಳಿ ಟೈಮ್ಸ್) : ಬೆಳ್ತಂಗಡಿ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 29/1998 ಕಲಂ 279, 304 (ಎ) ಐಪಿಸಿ ಪ್ರಕರಣದಲ್ಲಿ 6 ತಿಂಗಳು ಶಿಕ್ಷೆಗೊಳಪಟ್ಟು, ಸುಮಾರು 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆಸಾಮಿ, ಪುತ್ತೂರು ನಿವಾಸಿ ಅಬ್ದುಲ್ ರಹಿಮಾನ್ (50) ಎಂಬಾತನನ್ನು ಸೋಮವಾರ ಬೆಳ್ತಂಗಡಿ ಪೊಲೀಸರು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳ್ತಂಗಡಿ ಪೊಲೀಸ್ ಇನ್ಸ್ ಪೆಕ್ಟರ್ ಬಿ ಜಿ ಸುಬ್ಬಾಪೂರ್ ಮಠ, ಪಿಎಸ್ಸೈಗಳಾದ ಮುರಳೀಧರ ಹಾಗೂ ಯಲ್ಲಪ್ಪ ಅವರ ನಿರ್ದೇಶನದಲ್ಲಿ ಪುತ್ತೂರು ನಗರ ಪೊಲೀಸ್ ಠಾಣಾ ಎಎಸ್ಸೈ ಪರಮೇಶ್ವರ ಅವರ ಸಹಕಾರದಿಂದ ಬೆಳ್ತಂಗಡಿ ಠಾಣಾ ಎಚ್ ಸಿ ವೃಷಭ ಹಾಗೂ ಪಿಸಿ ಮುನಿಯ ನಾಯ್ಕ್ ಅವರುಗಳು ಈ ದಸ್ತಗಿರಿ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
0 comments:
Post a Comment