ಬಂಟ್ವಾಳದಲ್ಲಿ ಭಾರೀ ಮಳೆ : ಸಿಡಿಲಿಗೆ ಕೆಲವು ಮನೆಗಳಿಗೆ ಹಾನಿ - Karavali Times ಬಂಟ್ವಾಳದಲ್ಲಿ ಭಾರೀ ಮಳೆ : ಸಿಡಿಲಿಗೆ ಕೆಲವು ಮನೆಗಳಿಗೆ ಹಾನಿ - Karavali Times

728x90

6 October 2024

ಬಂಟ್ವಾಳದಲ್ಲಿ ಭಾರೀ ಮಳೆ : ಸಿಡಿಲಿಗೆ ಕೆಲವು ಮನೆಗಳಿಗೆ ಹಾನಿ



ಬಂಟ್ವಾಳ, ಅಕ್ಟೋಬರ್ 06, 2024 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಭಾನುವಾರ ಸಂಜೆ ಸುರಿದ ಭಾರೀ ಮಳೆ-ಸಿಡಿಲಿಗೆ ಕೆಲವೆಡೆ ಹಾನಿ ಸಂಭವಿಸಿದೆ. ಕೇಪು ಗ್ರಾಮದ ಕೋಡಂದೂರು ನಿವಾಸಿ ಜಯರಾಮ ನಾಯ್ಕ ಎಂಬವರ ಮನೆಗೆ ಸಿಡಿಲು ಬಡಿದು ಹಾನಿ ಸಂಭವಿಸಿದೆ. ಅಳಿಕೆ ಗ್ರಾಮದ ನಾರಾಯಣ ಮೂಲ್ಯ ಬಿನ್ ಕೊರಗು ಮೂಲ್ಯ ಅರುಂಬು ಅವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿ ಸಂಭವಿಸಿದೆ. ನರಿಕೊಂಬು ಗ್ರಾಮದ ಮಾರುತಿ ನಗರ ನಿವಾಸಿ ಶ್ರೀಮತಿ ಆಶಾ ಕೋಂ ಉಮೇಶ್ ನಾಯ್ಕ ಅವರ ವಾಸ್ತವ್ಯದ ಮನೆ ಮೇಲೆ ತೆಂಗಿನ ಮರ ಬಿದ್ದು ಮನೆಗೆ ಹಾನಿಯಾಗಿದೆ. ನರಿಕೊಂಬು ಮಾರುತಿ ನಗರ ನಿವಾಸಿ ಆಶಾ ಅವರ ಮನೆಗೆ ತೆಂಗಿನ ಮರ ಬಿದ್ದು  ಹಾನಿ ಸಂಭವಿಸಿದೆ. ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಭಾರೀ ಮಳೆ : ಸಿಡಿಲಿಗೆ ಕೆಲವು ಮನೆಗಳಿಗೆ ಹಾನಿ Rating: 5 Reviewed By: karavali Times
Scroll to Top