ಬಂಟ್ವಾಳ, ಅಕ್ಟೋಬರ್ 02, 2024 (ಕರಾವಳಿ ಟೈಮ್ಸ್) : ಬಂಟ್ವಾಳ-ವಿದ್ಯಾಗಿರಿ ಎಸ್ ವಿ ಎಸ್ ಕಾಲೇಜಿನಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಬಿಸಿಎ ಮುಗಿಸಿದ ಶಪೂನ್ ಎಸ್ ಪೂಂಜ ಇವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಿದ ರಾಜ್ಯ ಮಟ್ಟದ ಪಿಜಿಸಿಇಟಿ ಪರೀಕ್ಷೆಯ ಎಂಸಿಎ ವಿಭಾಗದಲ್ಲಿ 9ನೇ ರ್ಯಾಂಕ್ ಪಡೆದಿದ್ದಾರೆ.
ಪ್ರತಿ ವರ್ಷವು ಪರೀಕ್ಷಾ ಪ್ರಾಧಿಕಾರವು ಎಂಟೆಕ್, ಎಂಸಿಎ ಮೊದಲಾದ ಉನ್ನತ ವ್ಯಾಸಂಗ ಮಾಡಲಿರುವ ವಿದ್ಯಾರ್ಥಿಗಳಿಗೆ ಈ ಪರೀಕ್ಷೆಯನ್ನು ನಡೆಸುತ್ತಿದ್ದು ಸಾವಿರಾರು ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಾರೆ.
0 comments:
Post a Comment